ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕ್ಸಲರ ಶರಣಾಗತಿಯನ್ನ ಕ್ರೈಂ ಮನ್ನಾ ದಿನಾಚರಣೆ ಎಂದು ವ್ಯಂಗ್ಯವಾಗಿ ಟೀಕಿಸಿದ ಮಾಜಿ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ 6 ನಕ್ಸಲರು ಶರಣಾರಾದರು. ನಕ್ಸಲರ ಶರಣಾಗತಿಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ನಕ್ಸಲರು ಶರಣಾಗತಿಯಾಗುವುದಾದರೆ ನ್ಯಾಯಾಲಯದ ಮೂಲಕ ಆಗಲಿ ಎಂಬುದು ಬಿಜೆಪಿಯವರ ವಾದ.

ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಕ್ಸಲರು ಶರಣಾಗತಿಯನ್ನ ಬಿಜೆಪಿ ಶಾಸಕ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಗಿ ಟೀಕಿಸಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇಂದು ಬೆಂಗಳೂರಿನ "ಕೃಷ್ಣ"ದಲ್ಲಿ ಕ್ರೈಂ ಮನ್ನಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಬೆಳಗ್ಗೆ ಮತ್ತೊಬ್ಬ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಹ ನಕ್ಸಲರು ಶರಣಾಗತಿಗೆ ಆಕ್ಷೇಪ ವ್ಯಕ್ತಪಡಿಸಿದರು.

Edited By : Vijay Kumar
PublicNext

PublicNext

08/01/2025 11:00 pm

Cinque Terre

112.75 K

Cinque Terre

3

ಸಂಬಂಧಿತ ಸುದ್ದಿ