ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುವೆ - ಲಾಯರ್ ಜಗದೀಶ್‌ಗೆ ಡಿಚ್ಚಿ ಕೊಟ್ಟ ರಚಿತಾ ರಾಮ್

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ನಟಿ ರಚಿತಾ ರಾಮ್ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಇದು ರಚ್ಚು ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಇಷ್ಟು ಕೆಟ್ಟದಾಗಿ ಲಾಯರ್ ಜಗದೀಶ್ ಮಾತಾಡಬಾರದಿತ್ತು ಎಂದು ಕಾಮೆಂಟ್‌ಗಳು ಬಂದಿವೆ.

ಜಗದೀಶ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ರಚಿತಾ ರಾಮ್, ಇಂತಹ ಅಂತೆ-ಕಂತೆಗಳ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡೋದಿಲ್ಲ. ಆದ್ರೆ ಆರೋಪಿಸಿರುವಂತೆ ನಾನು ಆ ತಪ್ಪು ಮಾಡಿಲ್ಲ. 12 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ನಾನು ಅವರು ಹೇಳಿದಂತೆ ತಪ್ಪು ಮಾಡಿದ್ರೆ ಒಪ್ಪಿಕೊಳ್ತೇನೆ. ಆದ್ರೆ ತಪ್ಪೇ ಮಾಡಿಲ್ಲ ಎಂದಾದ ಮೇಲೆ ದೇವರು ಬಂದ್ರೂ ಒಪ್ಪಿಕೊಳ್ಳೋದಿಲ್ಲ. ಆ ವ್ಯಕ್ತಿ ಹಿರಿಯರು. ನನಗಿಂತ ಹೆಚ್ಚು ಅನುಭವ ಇರುವವರು. ಅವರ ಬಗ್ಗೆ ನನ್ನಲ್ಲಿ ಅಗೌರವ ಬರುವಂತೆ ಅವರು ಮಾತಾಡಬಾರದಿತ್ತು ಎಂದು ರಚಿತಾ ರಾಮ್ ಹೇಳಿದ್ದಾರೆ.

ಒಂದು ನನಗೆ ಕಷ್ಟ ಬಂದು ಎಲ್ಲವನ್ನೂ ಕಳೆದುಕೊಂಡ್ರೂ ಯಾವುದಾದ್ರೂ ದೇವಸ್ಥಾನದಲ್ಲಿ ಕೆಲಸ ಮಾಡಿ ಪ್ರಸಾದ ತಿಂದು ಬದುಕುತ್ತೇನೆ. ಹೊರತಾಗಿ ಯಾರ ಜೊತೆಯೂ ಹೋಗಲ್ಲ. ಇದನ್ನು ನನಗೆ ನನ್ನ ತಂದೆ-ತಾಯಿ ಕಲಿಸಿಕೊಟ್ಟಿದ್ದಾರೆ ಎಂದು ರಚಿತಾ ರಾಮ್ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಲಾಯರ್ ಜಗದೀಶ್‌ಗೆ ಟಾಂಗ್ ಕೊಟ್ಟಿದ್ದಾರೆ.

ಹಾಗಾದ್ರೆ ರಚಿತಾ ಬಗ್ಗೆ ಲಾಯರ್ ಜಗದೀಶ್ ಹೇಳಿದ್ದ ಆ ಹೇಳಿಕೆ ಏನು ಅನ್ನೋದಾದ್ರೆ ‘ರಚಿತಾ ರಾಮ್ ಅವರಿಗೆ ರಾಜಕಾರಣಿಗಳ ಜೊತೆ ಒಡನಾಟ ಇದೆ. ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಾರೆ. ರಾಜಕಾರಣಿಗಳ ಕೃಪಾಕಟಾಕ್ಷದಿಂದ ಬೆಳೆಯುತ್ತಿದ್ದಾರೆ ಎಂಬ ಆರೋಪ ಇದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಆರೋಪ ಬಂದಮೇಲೆ ಅವರ ಟೆಂಪಲ್ ರನ್ ಹೆಚ್ಚಿದೆ’ ಎಂದಿದ್ದರು. ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ಜಗದೀಶ್ ಈ ಹೇಳಿಕೆ ನೀಡಿದ್ದರು.

Edited By : Nagaraj Tulugeri
PublicNext

PublicNext

08/01/2025 03:36 pm

Cinque Terre

330.72 K

Cinque Terre

6

ಸಂಬಂಧಿತ ಸುದ್ದಿ