ಬಿಗ್ ಬಾಸ್ ಸೀಸನ್ 11 ಫಿನಾಲೆ ಹಂತಕ್ಕೆ ಸಮೀಪವಾಗಿದ್ದು ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಇಂತಹ ಸಂದರ್ಭದಲ್ಲಿ ತ್ರಿವಿಕ್ರಂ ಸಂಯಮ ಕಳೆದುಕೊಂಡಿದ್ದಾರೆ.
ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ಮಾತಿನ ಚಕಮಕಿ ನಡೆದಿದೆ. ಯಾರು ಉತ್ತಮ, ಯಾರು ಉತ್ತಮ ಅಲ್ಲ ಎನ್ನುವ ಚರ್ಚೆ ಬಂತು. ಆಗ ತ್ರಿವಿಕ್ರಂ ಹಾಗೂ ಮಂಜು ಪರಸ್ಪರ ಮಾತುಕತೆ ನಡೆಸಿದರು. ಅಂತಿಮವಾಗಿ ತ್ರಿವಿಕ್ರಂ ಅವರು ಆಟದಿಂದ ಹೊರಗುಳಿಯುವುದು ಎಂದಾಯಿತು. ಅವರು ನಾಮಿನೇಟ್ ಆಗಿದ್ದು ಮಾತ್ರವಲ್ಲ, ಫಿನಾಲೆ ಟಿಕೆಟ್ ಪಡೆಯಲು ವಂಚಿತರಾದರು. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರು ಮಂಜು ಜೊತೆ ಮಾತನಾಡುವಾಗ ಹದ್ದುಮೀರಿ ನಡೆದುಕೊಂಡಿದ್ದಾರೆ.
ತ್ರಿವಿಕ್ರಂ ಅವರು ಮಂಜುಗೆ ಏಕವಚನ ಬಳಕೆ ಮಾಡಿದ್ದಾರೆ. "ಹೋಗಲೋ, ಹೋಗಲೇ' ಎಂದೆಲ್ಲ ಕರೆದಿದ್ದಾರೆ. ಇದು ಮಂಜುಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರು ಮತ್ತೆ ಏನನ್ನೂ ಮಾತನಾಡಲು ಹೋಗಿಲ್ಲ. ಬಳಿಕ ಮಂಜಣ್ಣ ಎಂದು ತ್ರಿವಿಕ್ರಂ ಕರೆಯಲು ಹೋದಾಗ ಇದಕ್ಕೆ ಪ್ರತಿಕ್ರಿಯಿಸಿದ ಮಂಜು 'ಮಂಜಣ್ಣ ಎನ್ನಬೇಡ. ಹೋಗೋ ಬಾರೋ ಎಂದೇ ಕರಿ. ಒಮ್ಮೆ ಅದನ್ನು ಕೇಳಿದ ಮೇಲೆ ಇದನ್ನು ಕೇಳಿಸಿಕೊಳ್ಳೋಕೆ ಆಗಲ್ಲ' ಎಂದರು. ಆಗ ತ್ರಿವಿಕ್ರಂ ಅವರು "ಎಷ್ಟೊತ್ತಿಗೆ ತೆಗೆಯಬೇಕೋ ಮಂಜು' ಎಂದರು.
ಆ ಬಳಿಕ ತ್ರಿವಿಕ್ರಂ ಅವರಿಗೆ ತಪ್ಪಿನ ಅರಿವಾಗಿದೆ. ನೇರವಾಗಿ ಹೋಗಿ ಮಂಜು ಬಳಿ ಕ್ಷಮೆ ಕೇಳಿದರು. ಫಿನಾಲೆ ಸಮೀಪಿಸಿದಾಗ ತ್ರಿವಿಕ್ರಂ ಅವರು ಈ ರೀತಿ ಎಡವಿದ್ದು ಸರಿ ಅಲ್ಲ ಎಂಬ ಮಾತು ಅನೇಕ ಕಡೆಗಳಲ್ಲಿ ಕೇಳಿ ಬಂದಿದೆ.
PublicNext
08/01/2025 04:29 pm