ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಟಾಕ್ಸಿಕ್' ಕಾರ್ ಸ್ಪೆಶಾಲಿಟಿ ಏನು..?

ಬೆಂಗಳೂರು: ಟಾಕ್ಸಿಕ್ ಸಿನಿಮಾದ ಕಾರು ಸದ್ಯ ಎಲ್ಲೆಡೆ ಹಲ್ ಚಲ್ ಎಬ್ಬಿಸಿದೆ. ಈ ಕಾರಿನ ವಿಶೇಷತೆ ಏನು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಡಬಲ್ ಆಗಿದೆ. ಬ್ರಿಟನ್ ರಾಣಿ ಎಲಿಜಬೆತ್ ಬಳಸ್ತಿದ್ದ ದುಬಾರಿ ಕಾರು ಇದಾಗಿದೆ. ಯಶ್ ಹುಟ್ಟುಹಬ್ಬದ ಹಿನ್ನೆಲೆ ನಾಳೆ ಫಸ್ಟ್ ಲುಕ್ ರಿಲೀಸ್ ಆಗಲಿದೆ.

ಥೀಮ್ ಪೋಸ್ಟರ್‌ನಲ್ಲಿ ಎಲ್ಲರ ಗಮನ ಸೆಳೆದ ಕಾರು 1947ನೇ ವರ್ಷದ ಲಿಂಕನ್ ಕಾಸ್ಮೋಪೊಲಿಟನ್ ಕಾರು ಅಂತ ತಿಳಿದು ಬಂದಿದೆ. ಬ್ರಿಟನ್ ರಾಣಿ ಎಲಿಜಬೆತ್ 11 ಬಳಸ್ತಿದ್ದ ಕಾರು ಇದಾಗಿದ್ದು ಟಾಕ್ಸಿಕ್ ಸಿನಿಮಾದ ಕಥೆಯೂ ಇದೇ ಅವಧಿಯಲ್ಲಿ ನಡೆಯಲಿದೆ. 1945 ರಿಂದ 1950ರ ಕಾಲಘಟ್ಟದಲ್ಲಿ ಕಥೆ ನಡೆಯಲಿದೆ. ಅದಕ್ಕೆ ಈ ಕಾರು ಬಳಕೆ ಮಾಡಲಾಗಿದೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

07/01/2025 11:00 am

Cinque Terre

75.8 K

Cinque Terre

0