ಸುಚಿ ಲೀಕ್ಸ್ ಖ್ಯಾತಿಯ ವಿವಾದಾತ್ಮಕ ಗಾಯಕಿ ಸುಚಿತ್ರಾ ಅನಾರೋಗ್ಯದಿಂದ ಬಳಲುತ್ತಿರುವ ತಮಿಳು ನಟ ವಿಶಾಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವಿಶಾಲ್ ಪರಿಸ್ಥಿತಿಯನ್ನು ನೋಡಿ ಹಲವು ಮಂದಿ ನೊಂದು ಕೊಂಡಿದ್ದಾರೆ. ಆದರೆ, ಆತ ನೊಂದುಕೊಳ್ಳುವಷ್ಟು ಒಳ್ಳೆಯ ವ್ಯಕ್ತಿ ಅಲ್ಲ ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಈ ರೀತಿ ಮಾತನಾಡಿದ ಅವರು ಮತ್ತೆ ಜನರ ಕಟು ಟೀಕೆಗೆ ಒಳಗಾಗಿದ್ದಾರೆ.
ಹಿಂದೊಮ್ಮೆ ವಿಶಾಲ್ ಈ ಗಾಯಕಿಯ ಮನೆಗೆ ಹೋಗಿದ್ದರು. ಆಗ ವಿಶಾಲ್ ನಡೆದುಕೊಂಡ ರೀತಿ ಹೇಗಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಾನು ಹಾಗೂ ಕಾರ್ತಿಕ್ ಕುಮಾರ್ ಜೊತೆಯಲ್ಲಿ ವಾಸ ಮಾಡುತ್ತಿದ್ದಾಗ ಒಂದು ಘಟನೆ ನಡೆದಿತ್ತು. ಕಾರ್ತಿಕ್ ಕುಮಾರ್ ಇಲ್ಲದ ವೇಳೆ ಬಂದು ವಿಶಾಲ್ ಬಾಗಿಲು ಬಡಿದಿದ್ದ. ಬಾಗಿಲು ತೆರೆದ ನನಗೆ ವಿಶಾಲ್ ಕೈಯಲ್ಲಿ ವೈನ್ ಬಾಟಲ್ ಹಿಡಿದು ನಿಂತಿದ್ದು ಕಾಣಿಸಿತ್ತು. ಆ ವೇಳೆ ಅವನು ಕುಡಿದಿದ್ದ" ಎಂದು ಗಾಯಕಿ ಸುಚಿತ್ರಾ ಹೇಳಿಕೊಂಡಿದ್ದಾರೆ.
ಹಾಗಂತ ಈ ಘಟನೆ ಇಲ್ಲಿಗೆ ಮುಗಿದಿಲ್ಲ. " ಬಾಗಿಲು ತೆಗೆದ ಬಳಿಕ ನನಗೆ ಕಾರ್ತಿಕ್ ಕುಮಾರ್ ಇಲ್ಲವೇ ಎಂದು ಕೇಳಿದ. ಅವರು ಇಲ್ಲ ಎಂದು ಹೇಳಿದ್ದೆ. ಆಗ ವಿಶಾಲ್ ವೈನ್ ಬಾಟಲ್ ಅನ್ನು ನನಗೆ ಕೊಡುವುದಕ್ಕೆ ಮುಂದೆ ಬಂದಿದ್ದ. ಒಳಗೆ ಬರಬಹುದೇ ಎಂದು ಕೇಳಿದ. ನಾನು ಬೇಡ ಎಂದ ಕೂಡಲೇ, ಆ ವೈನ್ ಬಾಟಲ್ ಅನ್ನು ನನ್ನ ಕೈಗಿಟ್ಟು, ಈ ಕಾರಣಕ್ಕೆ ನಾನು ಬಂದಿದ್ದು ಎಂದು ಹೇಳಿದ." ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾರ್ತಿಕ್ ಕುಮಾರ್ ಇಲ್ಲ ಅವನು ಗೌತಮ್ ಮೆನನ್ ಆಫೀಸ್‌ನಲ್ಲಿ ಇದ್ದು, ಅಲ್ಲಿಗೆ ಹೋಗಿ ಕೊಡುವಂತೆ ಗಾಯಕಿ ಸುಚಿತ್ರ ಮುಖದ ಮೇಲೆ ಹೊಡೆದಂತೆ ಹೇಳಿ ಬಾಗಿಲು ಹಾಕಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ವಿಶಾಲ್‌ಗೆ ಕೆಟ್ಟ ಪದಗಳಿಂದ ಬೈದಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆ ಬಳಿಕ ವಿಶಾಲ್ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲೂ ವಿಶಾಲ್ ನೆನಪಿಸಿಕೊಂಡು ಶಪಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿಶಾಲ್ ಕೆಟ್ಟ ವ್ಯಕ್ತಿ ಎಂದಿದ್ದಾರೆ. ವಿಶಾಲ್ ಗುಣಮುಖರಾಗಲಿ ಎಂದು ಎಲ್ಲೂ ಪ್ರಾರ್ಥಿಸುತ್ತಿದ್ದೀರಿ. ಆದರೆ ದಿನ ವೈನ್ ಬಾಟಲಿ ಹಿಡಿದುಕೊಂಡು ಆ ಕೈಗಳು ಇಂದು ಮೈಕ್ ಹಿಡಿದುಕೊಳ್ಳುವುದಕ್ಕೆ ಪರದಾಡುತ್ತಿವೆ. ಅದನ್ನು ತನಗೆ ಬಹಳ ಖುಷಿಯಾಗಿದೆ ಎಂದು ಗಾಯಕಿ ಸುಚಿತ್ರ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಹೊರ ಬಂದ ಬಳಿಕ ನೆಟ್ಟಿಗರು ಗಾಯಕಿ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ.
PublicNext
09/01/2025 09:05 pm