ಬೆಂಗಳೂರು: ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ನಟಿ ಆಶ್ರಿತಾ ಶೆಟ್ಟಿ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ ಮತ್ತು ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಿಂದ ಅಳಿಸಿದ್ದಾರೆ.
ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಅವರು 2019ರಲ್ಲಿ ವಿವಾಹವಾದರು. ಆದರೆ ಸ್ವಲ್ಪ ಸಮಯದವರೆಗೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆಶ್ರಿತಾ ಅವರ ಹೊಸ ವರ್ಷದ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪಾಂಡೆ ಗೈರುಹಾಜರಾಗಿರುವುದನ್ನು ಹಲವಾರು ಅಭಿಮಾನಿಗಳು ಪ್ರಶ್ನಿಸಿದರು. ನಂತರ ನಟಿ ಕಾಮೆಂಟ್‌ಗಳನ್ನು ಸೀಮಿತಗೊಳಿಸಿದ್ದಾರೆ.
PublicNext
10/01/2025 07:47 am