ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಇಂದು ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಚಿತ್ರತಂಡಕ್ಕೆ ತೆಲಂಗಾಣ ಸರ್ಕಾರ ಶಾಕ್ ಕೊಟ್ಟಿದೆ.
‘ಗೇಮ್ ಚೇಂಜರ್’ ಚಿತ್ರದ ಮಧ್ಯರಾತ್ರಿ ಶೋಗೆ ಅನುಮತಿ ನೀಡಲು ನಿರಾಕರಿಸಿದೆ. ಇದರೊಂದಿಗೆ ‘ಪುಷ್ಪ 2’ ಕಾಲ್ತುಳಿತ ಪ್ರಕರಣದ ಬಳಿಕ ತೆಲಂಗಾಣ ಸರ್ಕಾರ ಎಚ್ಚೆತ್ತುಕೊಂಡಿದೆ.
ಮಲ್ಟಿಪ್ಲೆಕ್ಸ್‌ನಲ್ಲಿ 150 ರೂಪಾಯಿ ಹಾಗೂ ಥಿಯೇಟರ್‌ಗಳಲ್ಲಿ 100 ರೂಪಾಯಿ ಏರಿಕೆಗೆ ಅವಕಾಶ ನೀಡಿದೆ. ಇದು ಮೊದಲ ದಿನ ಮಾತ್ರ. ಜನವರಿ 11ರಿಂದ ಮಲ್ಟಿಪ್ಲೆಕ್ಸ್‌ನಲ್ಲಿ 100 ರೂಪಾಯಿ ಹಾಗೂ ಥಿಯೇಟರ್‌ಗಳಲ್ಲಿ 50 ರೂಪಾಯಿ ಏರಿಕೆಗೆ ಅವಕಾಶ ನೀಡಲಾಗಿದೆ. ಇನ್ನು ರಾಮ್ ಚರಣ್ ನಾಯಕಿಯಾಗಿ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.
PublicNext
10/01/2025 02:31 pm