ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರದಲ್ಲಿ ನಟ ದರ್ಶನ್ ಅಂಡ್ ಟೀಮ್ ಮೇಲೆ ಇಂದು ಆರೋಪ ನಿಗದಿಯಾಗಲು ( ಚಾರ್ಜ್‌ಸ್ ಫ್ರೇಮ್ ) ವಿಚಾರಣೆ ನಿಗದಿಯಾಗಿತ್ತು. ಈ ಹಿನ್ನಲೆ ದರ್ಶನ್ ಪವಿತ್ರಾ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ರು. ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನ ಇದೇ ಜನವರಿ 25ಕ್ಕೆ ಮುಂದೂಡಿದೆ.
ಕೋರ್ಟ್‌ನಲ್ಲಿ ದರ್ಶನ್ ಜೊತೆಗೆ ಮಾತನಾಡಲು ಮುಂದಾಗಿದ್ದ ಪವಿತ್ರಾ ದರ್ಶನ್ ಜೊತೆಗೆ ಕೆಲಕಾಲ ಮಾತುಕತೆ ನಡೆಸಿದ್ರು. ಈ ವೇಳೆ ಪವಿತ್ರಾಗೆ ಬೆನ್ನು ತಟ್ಟಿ ನಟ ದರ್ಶನ್ ಸಂತೈಸಿದ್ದಾರೆ.
ಪವಿತ್ರಾಗೌಡ ದೇವಸ್ಥಾನದ ನೆಪದಲ್ಲಿ ರಾಜ್ಯ ಬಿಟ್ಟು ಹೊರ ರಾಜ್ಯಕ್ಕೆ ಹೋಗಲು ಕೋರ್ಟ್‌ಗೆ ಮನವಿ ಸಲ್ಲಿಸಿದ್ರು. ಕೋರ್ಟ್ ಪವಿತ್ರಾಗೌಡ ಮುಂಬೈ ಮತ್ತು ದೆಹಲಿಗೆ ಹೋಗಲಿ ಅನುಮತಿ ನೀಡಿದೆ.
ಪವಿತ್ರಾಗೌಡ ದೇವಸ್ಥಾನಕ್ಕೆ ತೆರಳಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ರು. ಇನ್ನೂ ಇದೇ ವೇಳೆ ದರ್ಶನ್ ಕೂಡ ಮತ್ತೆ ಮೈಸೂರಿಗೆ ತೆರಳಲು ಅನುಮತಿ ಕೇಳಿದ್ದು, ಕೋರ್ಟ್ ಜನವರಿ 12 ರಿಂದ ಐದು ದಿನಗಳ ಕಾಲ ಅನುಮತಿ ನೀಡಿ ಆದೇಶ ಹೊರಡಿಸಿದೆ.
PublicNext
10/01/2025 04:20 pm