ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಅಧಿಕೃತ ಭಾಷೆ: ಕ್ರಿಕೆಟರ್ ಆರ್‌ ಅಶ್ವಿನ್

ಚೆನ್ನೈ: ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ, ಆದರೆ ಅಧಿಕೃತ ಭಾಷೆ ಎಂದು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರವಿಚಂದ್ರನ್ ಅಶ್ವಿನ್ ಭಾಗಿಯಾಗಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರು, ಕಾರ್ಯಕ್ರಮದಲ್ಲಿ ಹಾಜರಿದ್ದ ಎಷ್ಟು ಮಂದಿ ಇಂಗ್ಲಿಷ್, ತಮಿಳು ಮತ್ತು ಹಿಂದಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡರು. ‘ಹಾಜರಿರುವ ಇಂಗ್ಲಿಷ್ ವಿದ್ಯಾರ್ಥಿಗಳೇ, ಒಮ್ಮೆ ಜೋರಾಗಿ ಕೂಗಿ ಎಂದರು. ಆ ಬಳಿಕ ತಮಿಳು ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾರೆ. ಬಳಿಕ ಹಿಂದಿ ಎಂದು ಅಶ್ವಿನ್ ಕೇಳುತ್ತಾರೆ. ಈ ವೇಳೆ ಜನಸಮೂಹದಿಂದ ಅತ್ಯಂತ ಕಡಿಮೆ ಶಬ್ದ ಬರುತ್ತದೆ. ಆಗ ಮಾತನಾಡುಲು ಪ್ರಾರಂಭಿಸಿದ ಅಶ್ವಿನ್, ‘ಹಿಂದಿ ಅಧಿಕೃತ ಭಾಷೆ, ರಾಷ್ಟ್ರ ಭಾಷೆಯಲ್ಲ ಎಂದು ಹೇಳಲು ಬಯಸುತ್ತೇನೆ’ ಎಂದು ಹೇಳಿದರು.

Edited By : Vijay Kumar
PublicNext

PublicNext

10/01/2025 01:48 pm

Cinque Terre

15.28 K

Cinque Terre

0