ನ್ಯೂಜಿಲೆಂಡ್ ತಂಡದ ಕ್ರಿಕೆಟರ್ ಮಾರ್ಟಿನ್ ಗಪ್ಟಿಲ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ 2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ಅವರನ್ನ ರನೌಟ್ ಆಗಿದ್ದ ವಿಡಿಯೋ ವೈರಲ್ ಆಗಿದೆ.
2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಕಿವೀಸ್ 50 ಓವರ್ಗಳಲ್ಲಿ 240 ರನ್ಗಳ ಟಾರ್ಗೆಟ್ ನೀಡುತ್ತು. ಈ ಟಾರ್ಗೆಟ್ ಬೆನ್ನು ಹತ್ತಿದ್ದ ಟೀಂ ಇಂಡಿಯಾ 215 ರನ್ ಗಳಿಸಿರುವಾಗ ಕ್ರೀಸ್ನಲ್ಲಿ ಧೋನಿ, ಭುವನೇಶ್ವರ್ ಆಡುತ್ತಿದ್ದರು. ಗೆಲುವು ಸಾಧಿಸಲು ಭಾರತಕ್ಕೆ 10 ಎಸೆತಗಳಲ್ಲಿ 25 ರನ್‌ಗಳು ಬೇಕಾಗಿತ್ತು. ಆಗ ಗುಪ್ಟಿಲ್ ಡೈರೆಕ್ಟ್ ಹಿಟ್ ಮೂಲಕ ಧೋನಿಯನ್ನು ರನೌಟ್ ಮಾಡಿದರು. ಅಂದಿನ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, "ಇದು ಇನ್ನೂ ನೋವುಂಟುಮಾಡುತ್ತದೆ" ಎಂದು ಹೇಳಿದ್ದಾರೆ. "ಗುಪ್ಟಿಲ್ ಕ್ರಿಕೆಟ್ ಆಡಲು 'ರನೌಟ್' ಆಗಿದ್ದಾರೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
PublicNext
09/01/2025 05:10 pm