ನವದೆಹಲಿ: ಸ್ಟಾರ್ ಕಪಲ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಕ್ಕಳು ವಾಮಿಕಾ ಮತ್ತು ಅಕಾಯ್ ಜೊತೆ ಪ್ರೇಮಾನಂದ ಮಹಾರಾಜರನ್ನು ವೃಂದಾವಕ್ಕೆ ಭೇಟಿ ಕೊಟ್ಟಿದ್ದಾರೆ.
ಈ ಆಧ್ಯಾತ್ಮಿಕ ಭೇಟಿ ಸಂದರ್ಭ ಇಬ್ಬರೂ ಮಹಾರಾಜರೊಂದಿಗೆ ಸಂವಹನ ನಡೆಸಿದರು. ಅವರಿಗೆ ಕೈಮುಗಿದು, ಭಕ್ತಿಯಿಂದ ನೆಲದ ಮೇಲೆ ಕುಳಿತು ಗೌರವ ಸೂಚಿಸಿದರು. ಸದ್ಯ ಈ ವಿಡಿಯೋ ವೈರಲ್ ಆಗಿವೆ.
ವಿಡಿಯೋದಲ್ಲಿ ಅನುಷ್ಕಾ ತಮ್ಮ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಮಹಾರಾಜರೊಂದಿಗೆ ಮಾತನಾಡುತ್ತಿರೋದನ್ನು ಕಾಣಬಹುದು. 'ಕಳೆದ ಬಾರಿ ನಾವು ಬಂದಾಗ, ನಮ್ಮ ಮನಸ್ಸಿನಲ್ಲಿ ಕೆಲ ಪ್ರಶ್ನೆಗಳಿದ್ದವು, ಅವನ್ನು ಕೇಳಬೇಕೆಂದುಕೊಂಡಿದ್ದೆ. ಆದರೆ ಅಲ್ಲಿ ಕುಳಿತಿದ್ದವರು ಅದೇ ರೀತಿಯ ಪ್ರಶ್ನೆಗಳನ್ನು ಕೇಳಿದರು" ಎಂದು ಮಹಾರಾಜರಲ್ಲಿ ಅನುಷ್ಕಾ ತಿಳಿಸಿರೋದನ್ನು ಕಾಣಬಹುದು.
ಮಾತು ಮುಂದುವರಿಸಿ, ಈ ಭೇಟಿ ಬಗ್ಗೆ ನಾವು ಪ್ಲ್ಯಾನ್ ಮಾಡುತ್ತಿದ್ದಂತೆ, ನಾನು ನನ್ನ ಆಲೋಚನೆಗಳ ಬಗ್ಗೆ ಮಾನಸಿಕವಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೆ. ನೀವು ನನಗೆ ಪ್ರೇಮಭಕ್ತಿಯಿಂದ ಆಶೀರ್ವದಿಸಬೇಕೆಂದು ನಾನು ಬಯಸುತ್ತೇನೆ" ಎಂದು ತಿಳಿಸಿದ್ದಾರೆ. ಆಗ ಪ್ರೇಮಾನಂದ ಮಹಾರಾಜರು ಅದ್ಭುತವಾಗಿ ತಿಳಿಸಿದ್ದಾರೆ.
PublicNext
10/01/2025 07:03 pm