ತಿರುಮಲದಲ್ಲಿ ಬುಧವಾರ ರಾತ್ರಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕಾಲ್ತುಳಿತ ದುರಂತದಲ್ಲಿ ಐವರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ತಿರುಪತಿಯ ವಿಷ್ಣು ನಿವಾಸದಲ್ಲಿ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಮಯದಲ್ಲಿ ಕಾಲ್ತುಳಿತವು ಸಂಭವಿಸಿದೆ.
ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳುವಾಗ ಉಂಟಾದ ಕಾಲ್ತುಳಿತದಲ್ಲಿ ಆರು ಜನ ಮೃತಪಟ್ಟಿರುವ ಘಟನೆ ದುರಾದೃಷ್ಟಕರವಾದದ್ದು ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಲ್ತುಳಿತಕ್ಕೆ ಕಾರಣ (ಕಾಲ್ತುಳಿತ) ಮಿತಿಮೀರಿದ ಜನಸಂದಣಿ. ಇದು ದುರದೃಷ್ಟಕರ ಘಟನೆ. ಸಾವಿರಾರು ಭಕ್ತರು ಕೌಂಟರ್‌ಗಳಲ್ಲಿ ಜಮಾಯಿಸಿದ್ದರು. ಅಸ್ವಸ್ಥ ಮಹಿಳೆಯನ್ನು ಹೊರಗೆ ಬಿಡಲು ಗೇಟ್ ತೆರೆದಾಗ ಕಾಲ್ತುಳಿತ ಸಂಭವಿಸಿತು. ಅದರಲ್ಲೂ ಜನಸಮೂಹವು ಒಮ್ಮೆಲೇ ಮುಂದಕ್ಕೆ ಧಾವಿಸಿದ್ದೇ ಅವ್ಯವಸ್ಥೆಗೆ ಕಾರಣವಾಯಿತು. ಎಂದು ಟಿಟಿಡಿ ಅಧ್ಯಕ್ಷರು ಹೇಳಿದ್ದಾರೆ.
PublicNext
09/01/2025 09:29 pm