ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಚಿನ್ನಾಭರಣ ಎಗರಿಸಿದ ಪ್ರಕರಣ-ಆರೋಪಿ ಮಹಿಳೆಯ ಬಂಧನ: ಸೊತ್ತು ವಶ

ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿ ಕಳೆದ ಸೋಮವಾರ ಮಹಿಳೆಯೋರ್ವರ ಬ್ಯಾಗ್‌ನಿಂದ 114 ಗ್ರಾಂನ ಚಿನ್ನಾಭರಣ ಎಗರಿಸಿರುವ ಪ್ರಕರಣವನ್ನು `ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ಬಂಟ್ವಾಳ ತಾಲೂಕು ಕೊಮಿನಡ್ಕ ನಿವಾಸಿ ನಸೀಮಾ(31) ಎಂದು ಗುರುತಿಸಲಾಗಿದೆ.

ಈಕೆಯಿಂದ ಕಳವುಗೈಯ್ಯಲಾದ ಚಿನ್ನಾಭರಣವನ್ನು ವಶಪಡಿ ಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಮನೆ ನಿವಾಸಿ ಮುಸ್ತಫ ಎಂಬವರ ಪತ್ನಿ ಅಬೀಬಾ ಎಂಬವರು ಜ.6ರಂದು ಪೆರ್ನೆಯ ಹಾಲ್‌ಗೆ ವಿವಾಹ ಕಾರ್ಯಕ್ರಮಕ್ಕೆ ತೆರಳುವ ವೇಳೆ 8 ಗ್ರಾಂನ ಚಿನ್ನದ ನೆಕ್ಲೀಸ್ ಹಾಗೂ ಜೊತೆಗಿದ್ದ ಬಾವನ ಪತ್ನಿಯ 106 ಗ್ರಾಂ ಚಿನ್ನಾಭರಣವನ್ನು

ಒಂದು ಬಾಕ್ಸ್‌ ನೊಳಗಡೆ ಹಾಕಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ವಿವಾಹ ಕಾರ್ಯಕ್ರಮ ಮುಗಿಸಿ ಕಡಬಕ್ಕೆ ತೆರಳಲು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಬಸ್ ಏರಿದ್ದರು.

ಈ ವೇಳೆ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ಚಿನ್ನ ಇಟ್ಟಿದ್ದ ಬಾಕ್ಸ್ ಕಳವಾಗಿತ್ತು.

ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ನಸೀಮಾಳನ್ನು ಬಂಧಿಸಿದ್ದಾರೆ. ಆಕೆಯ ದ್ವಿಚಕ್ರ ವಾಹನದಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಕವಿತಾ, ನಾಗರಾಜ, ಮೋಹನ್, ಗಿರೀಶ್, ಹೇಮರಾಜ್, ದಿವಾಕರ ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

10/01/2025 04:21 pm

Cinque Terre

982

Cinque Terre

0

ಸಂಬಂಧಿತ ಸುದ್ದಿ