ಮಂಗಳೂರು: ಪುತ್ತೂರಿನ ಸಂತ ಫಿಲೋಮೀನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜನವರಿ 9ರಂದು ಸಂಜೆ ನಡೆದಿದೆ.
ನರಿಮೊಗರು ಕೂಡುರಸ್ತೆಯ ಕೇಶವ ಜೋಗಿ ಎಂಬುವರ ಪುತ್ರಿ ಸಂತ ಪಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ (17ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ದೀಕ್ಷಿತಾ ಜನವರಿ 9ರಂದು ಕಾಲೇಜಿಗೆ ಹೋಗಿದ್ದು ಅಲ್ಲಿಂದ ಸಂಜೆ ವಾಪಸ್ ಮನೆಗೆ ಬಂದಿದ್ದಾರೆ. ಬಳಿಕ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/01/2025 02:37 pm