ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಅಂಚೆ ಇಲಾಖೆ ಗ್ರಾಮೀಣ ಭಾಗದಲ್ಲಿ ಜನಸ್ನೇಹಿಯಾಗಿದೆ - ಡಾ. ಹರಿಕೃಷ್ಣ ಪುನರೂರು

ಮುಲ್ಕಿ: ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಅಧಾರ್‌ ಸೇವೆ ಮಾಡುವ ಮೂಲಕ ಜನರ ಸ್ನೇಹ ಸೇತುವಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಾಲ ಅಧಾರ್‌ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು . ಅಂಚೆ ಇಲಾಖೆಯ ರಾಮಚಂದ್ರ ಕಾಮತ್ ಬೆಳ್ಮಣ್ ರವರು ಅಂಚೆ ಇಲಾಖೆಯ ಮಾಹಿತಿ ನೀಡಿ ಯಾವ ಸೇವೆಯು ಪಡೆಯಬೇಕಾದರೆ ಅಧಾರ್‌ ಅಗತ್ಯವಿದ್ದು ಅದರಲ್ಲೂ ಚಿಕ್ಕ ಮಕ್ಕಳಿಗೆ ಅಧಾರ್‌ ಅಗತ್ಯವಿದ್ದು ಗ್ರಾಮೀಣ ಮಟ್ಟದಲ್ಲಿ ಜನರಿಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಅಧಾರ್‌ ಶಿಬಿರ ಹಮ್ಮಿಕೊಂಡಿದೆ .ಮುಂದಿನ ದಿನದಲ್ಲಿ ಹಲವು ಕಡೆಗಳಲ್ಲಿ ಇಂತಹ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು,

ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶೈಲ ಕೆ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸುರಕ್ಷಾ , ನಮಿತಾ, ಅಂಚೆ ಮೇಲ್ವಿಚಾರಕ ಧನಂಜಯ ಐಗಳ್ , ಗ್ರಾಮೀಣ ಅಂಚೆ ಇಲಾಖೆಯ ಶಕುಂತಾಳ ಶೆಟ್ಟಿ , ಸುಗಂದಿ ಶೆಟ್ಟಿ , ಸುನಿಲ್ ವಿಠಲ್ ತಲವಾರ್, ಚರಣ್ ಕುಮಾರ್ ಮತ್ತಿತತರು ಉಪಸ್ಥಿರಿದ್ದರು. 103 ಮಕ್ಕಳಿಗೆ ಬಾಲಅಧಾರ್‌ ನಲ್ಲಿ ನೋಂದಣೆ ನಡೆಯಿತು.

Edited By : PublicNext Desk
Kshetra Samachara

Kshetra Samachara

09/01/2025 04:26 pm

Cinque Terre

1.09 K

Cinque Terre

0

ಸಂಬಂಧಿತ ಸುದ್ದಿ