ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಕರ ಸಂಕ್ರಾಂತಿ ಪ್ರಯುಕ್ತ ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

ಮಂಗಳೂರು: ಮಕರ ಸಂಕ್ರಮಣ ಹಾಗೂ ವಾರಾಂತ್ಯದ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರಕ್ಕೆ ಜನವರಿ 10ರ ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ರೈಲು ಸಂಚರಿಸಲಿದೆ. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮನವಿಯಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ.

ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ವಿಶ್ವೇರಯ್ಯ ಟರ್ಮಿನಲ್‌ನಿಂದ ಜನವರಿ 10ರ ಮಧ್ಯಾಹ್ನ 1ಕ್ಕೆ ಹೊರಡಲಿದ್ದು, ಪಡೀಲ್ ಬೈಪಾಸ್ ಮೂಲಕ ರಾತ್ರಿ 12ಕ್ಕೆ ಉಡುಪಿ, 1 ಗಂಟೆಗೆ ಕುಂದಾಪುರಕ್ಕೆ ಬಂದು, ಬಳಿಕ ಕಾರವಾರ ಕಡೆಗೆ ಸಂಚರಿಸಲಿದೆ. ಈ ರೈಲು ಜನವರಿ 11ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ಸಂಚರಿಸಲಿದೆ.

Edited By : PublicNext Desk
PublicNext

PublicNext

10/01/2025 07:38 am

Cinque Terre

6.61 K

Cinque Terre

0

ಸಂಬಂಧಿತ ಸುದ್ದಿ