ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಕಾಡು ಆನೆಗಳ ಹಾವಳಿ, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಬೇಳೂರು ಸೂಚನೆ

ಸಾಗರ: ಆನೆಗಳ ದಾಳಿಯಿಂದ ಕ್ಷೇತ್ರದ ಬೆಳೂರು,ಗಿಲ್ಲಗೊಂಡಿ ಹಾಗೂ ಗೌತಮಪುರ ಗಾಡಿ ಭಾಗದಲ್ಲಿ ಬಹಳಷ್ಟು ಹಾನಿಯಾಗಿದೆ ಈ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಭಾನುವಾರ ಸಾಗರದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳಿಂದ ಕ್ಷೇತ್ರದ ಬೆಳೂರು,ಗಿಲ್ಲಗೊಂಡಿ ಹಾಗೂ ಗೌತಮಪುರ ಗಾಡಿ ಭಾಗದಲ್ಲಿ ಕಾಡು ಆನೆಗಳು ಕಂಡು ಬಂದಿದ್ದು ಈ ವಿಚಾರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಖಾತೆ ಇರುವ ಜಮೀನುಗಳಿಗೆ ತಕ್ಷಣ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಖಾತೆ ಇಲ್ಲದ ಜಮೀನಿಗೆ ಪರಿಹಾರ ನೀಡಲು ಸಾಧ್ಯವಿಲ್ಲ, ಇನ್ನು ಕ್ಷೇತ್ರದ ಕೆಲವು ಕಡೆ ELEPHANT PROTECTION TRENCH ಮಾಡಲಾಗುವುದು ಈಗ ಈ ಭಾಗದಲ್ಲೂ ಮಾಡಲು ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

05/01/2025 02:57 pm

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ