ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'HMPV' ಹೊಸ ವೈರಸ್ ಅಲ್ಲ, ಆತಂಕ ಬೇಡ ಸೋಂಕಿನ ಬಗ್ಗೆ WHO ನಿಗಾವಹಿಸಿದೆ" : ಜೆ.ಪಿ ನಡ್ಡಾ ಸ್ಪಷ್ಟನೆ

ನವದೆಹಲಿ: 2001ರಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ಉಸಿರಾಟದ ವೈರಸ್ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಹೊಸ ವೈರಸ್ ಏನಲ್ಲ, ಇದು ಹಲವು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಹೀಗಾಗಿ, ಹೊಸದಾಗಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.

ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಭಾರತದಲ್ಲಿ 6 ಪ್ರಕರಣಗಳ ವರದಿಗಳ ನಂತರ ಆತಂಕ ಹೆಚ್ಚಾಗಿದೆ.

“HMPV ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದು ಗಾಳಿಯ ಮೂಲಕ, ಉಸಿರಾಟದ ಮೂಲಕ ಹರಡುತ್ತದೆ. ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದ ಆರಂಭದಲ್ಲಿ ಈ ವೈರಸ್ ಹೆಚ್ಚು ಹರಡುತ್ತದೆ” ಎಂದು ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

“ವಿಶ್ವ ಆರೋಗ್ಯ ಸಂಸ್ಥೆ ಈ ಸೋಂಕಿನ ಬಗ್ಗೆ ಎಚ್ಚರ ವಹಿಸಿದೆ. ಅದರ ವರದಿ ಶೀಘ್ರದಲ್ಲೇ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

Edited By : Abhishek Kamoji
PublicNext

PublicNext

06/01/2025 10:30 pm

Cinque Terre

137.08 K

Cinque Terre

6

ಸಂಬಂಧಿತ ಸುದ್ದಿ