ನೇಪಾಳದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನಲ್ಲಿ ಮಂಗಳವಾರ ತೀವ್ರ ಪ್ರಮಾಣದಲ್ಲಿಯೇ ಭೂಕಂಪ ಸಂಭವಿಸಿ 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಇನ್ನೂ ರಿಕ್ಷರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.1 ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಬೆಳಿಗ್ಗೆ 6.35ಕ್ಕೆ ಮೊದಲ ಬಾರಿಗೆ ಭೂಮಿ ಕಂಪಿಸಿದೆ.
ಕಂಪನದ ತೀವ್ರತೆಗೆ ಮನೆ, ಕಟ್ಟಡಗಳು ಧರಶಾಯಿಯಾಗಿವೆ. ನೇಪಾಳ-ಟಿಬೆಟ್ ಗಡಿಯ ಬಳಿ ಲೊಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಪ್ರಾಥಮಿಕ ವರದಿಗಳ ಪ್ರಕಾರ ಪ್ರಬಲ ಭೂಕಂಪನದಿಂದ ಟಿಬೆಟ್‌ನಲ್ಲಿ 32 ಮಂದಿ ಸಾವನ್ನಪ್ಪಿದ್ದು, ಚೀನಾದ ಶಿಗಾಟ್ಸೆಯಲ್ಲಿ 9 ಮಂದಿ ಅಸುನೀಗಿದ್ದಾರೆ ಎಂದು ಎಂದು ವರದಿಯಾಗಿದೆ.
ಇತ್ತ ಭೂತಾನ್, ಬಾಂಗ್ಲಾದೇಶ ಹಾಗೂ ಭಾರತದ ಕೆಲ ರಾಜ್ಯಗಳಲ್ಲೂ ಭೂ ಕಂಪಿಸಿದ ಅನುಭವವಾಗಿದೆ. ಭಾರತದ ರಾಜಧಾನಿ ದಿಲ್ಲಿ ಎನ್‌ಸಿಆರ್ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಲ್ಲೂ ಭೂಕಂಪನದ ಅನುಭವ ಆಗಿದ್ದು ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
PublicNext
07/01/2025 11:58 am