ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಡೀಪುರದಲ್ಲಿ ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

ಗುಂಡ್ಲುಪೇಟೆ (ಚಾಮರಾಜನಗರ) : ಬಂಡೀಪುರದಲ್ಲಿ ಐದು ಹುಲಿಗಳ ದರ್ಶನವಾಗಿದೆ. ಹೊಸ ವರ್ಷದ ಹೊತ್ತಲ್ಲಿ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಇನ್ನೂ ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಸಂಚಾರದ ಅಪರೂಪದ ದೃಶ್ಯ ವೈರಲ್‌ ಆಗಿದೆ.

ಹೌದು ಬಂಡೀಪುರ ಅಭಯಾರಣ್ಯದ ಸಫಾರಿ ವೇಳೆ ಏಕಾಕಾಲದಲ್ಲಿ ನಾಲ್ಕು ಮರಿ ಜೊತೆ ತಾಯಿ ಹುಲಿ ಕಾಣಿಸಿಕೊಳ್ಳುವ ಮೂಲಕ ವರ್ಷಾಂತ್ಯದಲ್ಲಿ ಸಫಾರಿಗೆ ಪ್ರಿಯರಿಗೆ ಖುಷಿ ನೀಡಿದೆ.

ಬಂಡೀಪುರ ಸಫಾರಿ ಜೋನ್ ವ್ಯಾಪ್ತಿಯ ಮೂರುಕೆರೆ ಬಳಿಯಲ್ಲಿ ನಾಲ್ಕು ಚಿಕ್ಕ ಮರಿಗಳೊಂದಿಗೆ ತಾಯಿ ಹುಲಿ ಹೆಜ್ಜೆ ಹಾಕಿದೆ. ಈ ದೃಶ್ಯವನ್ನು ಮಂಗಳವಾರ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರು ತಮ್ಮ ಕ್ಯಾಮಾರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟಿದ್ದಾರೆ. ಬಂಡೀಪುರ ಸಫಾರಿಗೆ ವರ್ಷಾಂತ್ಯದ ಕೊನೆದಿನ ಮಂಗಳವಾರ ಪ್ರವಾಸಿಗರೆ ದಂಡೇ ಆಗಮಿಸಿತ್ತು.

Edited By : Nirmala Aralikatti
PublicNext

PublicNext

01/01/2025 02:32 pm

Cinque Terre

42.65 K

Cinque Terre

0