ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಸಾಹಿತಿ ನಾ ಡಿಸೋಜ ಅಂತಿಮ ಯಾತ್ರೆಗೆ ಸಕಲ ಸಿದ್ಧತೆ - ಎಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ? ಇಲ್ಲಿದೆ ವಿವರ

ಸಾಗರ : ಕರ್ನಾಟಕ ರಾಜ್ಯದ ಹಿರಿಯ ಸಾಹಿತಿ 2014 ರಲ್ಲಿ ಮಡಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇವರು ಆಯ್ಕೆ ಆಗಿದ್ದ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರಾದ ಡಾ ನಾ ಡಿಸೋಜ ರವರು ಚಿರನಿದ್ರೆಗೆ ಜಾರಿದ್ದಾರೆ. ಸಾಗರದ ಸಂತೆ ಜೋಸೆಫ್ ದೇವಾಲಯದ ಆವರಣದಲ್ಲಿ ನಾಳೆ ಮಂಗಳವಾರ ಅಂತ್ಯಕ್ರಿಯೆ ನೆರವೇರಲಿದೆ.

ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದ್ದು,ಸಾಗರ ನಗರಸಭೆಯ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಇಂದು ಅವರ ನಿವಾಸದ ಬಳಿ ಕುಟುಂಬಸ್ಥರಿಗೆ ಸಮಾಜದವರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮಂಗಳವಾರ ಬೆಳಗ್ಗೆ 9 ಘಟನೆ ಸುಮಾರಿಗೆ ಡಾ ನಾ ಡಿಸೋಜ ರವರ ಪಾರ್ಥಿವ ಶರೀರವನ್ನು ನೆಹರೂ ನಗರದ ನಿವಾಸದಿಂದ ತೆರೆದ ವಾಹನದ ಮೂಲಕ ಹೊರಡಲಿರೋ ಅಂತಿಮ ಮೆರವಣಿಗೆ ನಗರ ಬಿಹೆಚ್ ರಸ್ತೆ, ಅಶೋಕ್ ರಸ್ತೆ, ಸಾಗರ ಹೋಟೆಲ್ ವೃತ್ತ, ಸರ್ಕಾರಿ ಆಸ್ಪತ್ರೆ ರಸ್ತೆ ಮಾರ್ಗವಾಗಿ ನಗರಸಭೆಯ ಗಾಂಧಿ ಮೈದಾನಕ್ಕೆ ತಲುಪಲಿದೆ.

ನಂತರ 11 ಗಂಟೆ ಸುಮಾರಿಗೆ ರಾಜ್ಯ ಸರ್ಕಾರದ ಆದೇಶದಂತೆ ಸರ್ಕಾರಿ ಗೌರವ ಸಲ್ಲಿಸಲಾಗುವುದು.ತದನಂತರ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಮಧ್ಯಾಹ್ನ 2:30 ರ ಸುಮಾರಿಗೆ ಗಾಂಧಿ ಮೈದಾನದಿಂದ ಸಾಗರದ ಸಂತೆ ಜೋಸೆಫ್ ದೇವಾಲಯಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಕ್ರೈಸ್ತ ಸಮುದಾಯದ ಗುರುಗಳಾ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ನಾ ಡಿಸೋಜ ರವರ ಕುಟುಂಬಸ್ಥರು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.

ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)

Edited By : PublicNext Desk
PublicNext

PublicNext

06/01/2025 09:51 pm

Cinque Terre

22.18 K

Cinque Terre

0

ಸಂಬಂಧಿತ ಸುದ್ದಿ