ಶಿವಮೊಗ್ಗ : ಬಾಲ ಕಾರ್ಮಿಕರು ಹೆಚ್ಚಾಗುತ್ತಿರುವ ಆರೋಪ ಹಿನ್ನೆಲೆ ನಮ್ಮ ಇಲಾಖೆ ಬಾಲ ಕಾರ್ಮಿಕರನ್ನ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದೆ. ಈ ಬಗ್ಗೆ ಜಾಸ್ತಿ ದಾಳಿ ಮಾಡಿದ್ರೆ ಪ್ರಯೋಜನ ಆಗೋಲ್ಲ. ಬಾಲ ಕಾರ್ಮಿಕರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಾಲ ಕಾರ್ಮಿಕರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಾವು ನೀವು ಸೇರಿ ಮಾಡಬೇಕು. ಬೇರೆ ರಾಜ್ಯದವರೇ ಹೆಚ್ಚು ಬಾಲ ಕಾರ್ಮಿಕರಾಗಿ ಕಂಡು ಬರುತ್ತಿದ್ದಾರೆ. ಅವರನ್ನ ಶಾಲೆಗೆ ಸೇರಿಸಲು ಆ ರಾಜ್ಯದ ಜೊತೆ ಮಾತನಾಡುತ್ತೇವೆ. ಬೇರೆ ಬೇರೆ ಜಿಲ್ಲೆಯಲ್ಲೂ ಒಂದೊಂದು ಕಡೆಯಿಂದ ಬಾಲ ಕಾರ್ಮಿಕರು ಬರ್ತಾ ಇದ್ದಾರೆ. ಬೇರೆ ರಾಜ್ಯದಿಂದ ಬಂದ ಕಾರ್ಮಿಕರ ಬಗ್ಗೆ ಹೊಸ ಕಾನೂನಿನ ಅವಶ್ಯಕತೆ ಇದೆ ಎಂದರು.
ಸಾರಿಗೆ ಬಸ್ ದರ ಹೆಚ್ಚಳ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು ಬಸ್ ದರ ಐದು ವರ್ಷದಿಂದ ಏರಿಕೆ ಆಗಿಲ್ಲ. ಪೆಟ್ರೋಲ್ ಡಿಸೇಲ್ ದರ ಸಹ ಹೆಚ್ಚಾಗಿದೆ. ಹೊಸದಾಗಿ ಐದು ಸಾವಿರ ಬಸ್ ಖರೀದಿ ಮಾಡಿದ್ದೀವಿ. ಬೇರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ. ಜಿಡಿಪಿಯಲ್ಲಿ ಗುಜರಾಜ್ ಮೊದಲ ಸ್ಥಾನದಲ್ಲಿ ಇಲ್ಲ. ನಮ್ಮ ರಾಜ್ಯ ಜಿಡಿಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಡಾಲರ್ ದರ ಹೆಚ್ಚಳವಾಗಿದೆ. ಅದನ್ನ ಯಾರು ಪ್ರಶ್ನೆ ಮಾಡುತ್ತಿಲ್ಲ. ಕಾಂಗ್ರೆಸ್ ಆಡಳಿತ ಇರೋ ಕಡೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನು ಕಾಂಗ್ರೆಸ್, ಬಿಜೆಪಿಯವರ ದುಡ್ಡು ಅಲ್ಲ, ದೇಶದ ದುಡ್ಡು ಇದು. ಗ್ಯಾರಂಟಿ ಬಗ್ಗೆ ಚರ್ಚೆ ಮಾಡುವ ಬಿಜೆಪಿ ಸ್ವಾತಂತ್ರ್ಯ ಸಿಕ್ಕಾಗ 50 ಲಕ್ಷ ಕೋಟಿ ಸಾಲ ಇತ್ತು. ಇವಾಗ 200 ಲಕ್ಷ ಕೋಟಿ ಸಾಲ ಆಗಿದೆ. ಅಲ್ದೆ ವಂದೇ ಭಾರತ್ 36 ರೈಲು ಇರೋದು ಅಷ್ಟೇ. ಅದಕ್ಕೆ 2000 ಸಾವಿರ ಕೋಟಿ ಪ್ರಚಾರ ತೆಗೆದುಕೊಂಡಿದ್ದಾರೆ. ಬಿಜೆಪಿ ಬಂದ ಮೇಲೆ ನಮ್ಮ ದೇಶದಲ್ಲಿ ಏನೇನು ಆಗಿದೆ ಗೊತ್ತಾ ಎಲ್ಲದಕ್ಕೂ ನಾನು ರೆಡಿ ಇದ್ದೀನಿ, ದಾಖಲೆ ತೋರಿಸಿ ಚರ್ಚೆ ಮಾಡೋಣ ಬನ್ನಿ ಎಂದು ಬಹಿರಂಗ ಸವಾಲ್ ಹಾಕಿದರು.
PublicNext
06/01/2025 08:49 pm