ಸಮಾಜಮುಖಿ ವ್ಯಕ್ತಿತ್ವಕ್ಕಾಗಿ ಹೃದಯಕ್ಕೆ ಶಿಕ್ಷಣ ನೀಡುವ ಅವಶ್ಯಕತೆಯಿದೆ - ನಾರಾಯಣ ರಾವ್
ಶಿವಮೊಗ್ಗ : ನಾವು ನೀಡುವ ಶಿಕ್ಷಣ ಹೃದಯದ ಮೂಲಕ ಮಸ್ತಕ ತಲುಪಬೇಕಾಗಿದ್ದು, ಆಗ ಮಾತ್ರ ಹೃದಯವಂತ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಹೇಳಿದರು.
ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಬುಧವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಾಂಸ್ಕೃತಿಕ, ಕ್ರೀಡಾ ವಿಭಾಗಗಳ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭವಿಷ್ಯದ ಜೀವನದಲ್ಲಿ ತೊಡಗಿಸಿಕೊಳ್ಳುವಾಗ ಇನ್ನೊಬ್ಬರ ಸಂತೋಷ ಬರೆಯುವ ಪೆನ್ಸಿಲ್ ನೀವಾಗುವುದಕ್ಕಿಂತ, ನೋವನ್ನು ಅಳಿಸುವ ರಬ್ಬರ್ ನೀವಾಗಿ. ಹಣ ನಮಗೆ ಧೈರ್ಯ ಕೊಡಬಹುದು, ತೃಪ್ತಿ ಅಲ್ಲ. ನಮ್ಮ ಸಂಸ್ಕೃತಿ, ಹಿರಿಯರ ಕಾಲಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವತೆ ಕಳೆದುಕೊಳ್ಳತ್ತಾ ಹೋಗುತ್ತದೆ. ವ್ಯಕ್ತಿತ್ವದ ನಿರೂಪಣೆಗೆ ಮಾತು ಬಂಡವಾಳವಾಗಿದ್ದು, ಆತ್ಮವಿಶ್ವಾಸ ಹೊಂದಿದ ತೂಕದ ಮಾತುಗಳು ನಿಮ್ಮದಾಗಲಿ.
Kshetra Samachara
08/01/2025 03:22 pm