ಶಿವಮೊಗ್ಗ: ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಅನ್ಲಾಕ್ ರಾಘವ ಕನ್ನಡ ಚಲನ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಗೊಳಿಸಲಾಯಿತು. ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಸಮಾರಂಭ ಉದ್ಘಾಟಿಸಿದರು. ಮಾಜಿ ಸಚಿವ ಆರಗ ಜ್ಞಾನೇಂದ್ರರ ಉಪಸ್ಥಿತಿಯಲ್ಲಿ ಟೈಟಲ್ ಟ್ರ್ಯಾಕ್ ಬಿಡುಗಡೆಗೊಳಿಸಿ ಮೊದಲ ಪ್ರದರ್ಶನ ಮಾಡಲಾಯಿತು.
ಉದ್ಯಮಿ ಮದನ್ ಗೌಡ್ರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ತೀರ್ಥಹಳ್ಳಿ ಮೂಲದ ನಾಯಕ ಮಿಲಿಂದ್ ಗೌತಮ್ ಮಾತನಾಡಿ, ಮಲೆನಾಡಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಇನ್ನು, ಚಿತ್ರಕ್ಕೆ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ರೆ, ವಿಜಯ್ ಪ್ರಕಾಶ್ ಗಾಯನ, ಪ್ರಮೋದ್ ಮರವಂತೆ ಸಾಹಿತ್ಯ, ಮುರಳಿಯವರ ನೃತ್ಯ ಸಂಯೋಜನೆ ಇದೆ. ಸ್ಯಾಂಡಲ್‌ವುಡ್ ಭರವಸೆ ನಾಯಕ ಮಿಲಿಂದ್, ಲವ್ ಮಾಕ್ಟೇಲ್- 2 ಬೆಡಗಿ ರಚೆಲ್ ಡೇವಿಡ್ ನಾಯಕ- ನಾಯಕಿಯಾಗಿ ಅಭಿನಯಿಸಿದ್ದು, ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ ಡಿ. ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸಿದ್ದಾರೆ.
PublicNext
08/01/2025 08:18 pm