ಸಾಗರ: ಸಿಗಂದೂರು ರಸ್ತೆಯಲ್ಲಿ ಇರುವ ಬಟ್ಟೆ ಅಂಗಡಿಯ ಮುಂದೆ ಕಿಡಿಗೇಡಿಗಳು ಮಾಟಮಂತ್ರ ಮಾಡಿ ಹೋಗಿದ್ದು ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಪ್ರತಿದಿನ ದಂತೆ ನಿನ್ನೆ ಶನಿವಾರ ತನ್ನ ಕೆಲಸ ಮುಗಿಸಿಕೊಂಡು ರಾತ್ರಿ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗಿ ಇಂದು ಬೆಳಿಗ್ಗೆ ಅಂಗಡಿ ಬಳಿ ಬಂದ ಮಾಲೀಕನಿಗೆ ಆಶ್ಚರ್ಯ ಉಂಟಾಗಿದೆ.
ಅಂಗಡಿಯ ಮುಂದೆ ಯಾರೂ ಕಿಡಿಗೇಡಿಗಳು ಮೂರು ಲಿಂಬೆ ಹಣ್ಣಿಗೆ ಮೊಲೆ ಹಾಕಿ ಎಲೆ ಕಾಯಿ ಜೊತೆಗೆ ಲಿಂಬೆ ಹಣ್ಣಿನ ಮೇಲೆ ಉರ್ದು ಭಾಷೆಯಲ್ಲಿ ಮಾಲೀಕ ಹಾಗೂ ಮಾಲೀಕನ ತಾಯಿಯ ಹೆಸರು ಬರೆದು ಮಾಟಮಂತ್ರ ಮಾಡಿ ಹೋಗಿರುವ ಘಟನೆ ನಡೆದಿದೆ.
ಅಂಗಡಿ ಮಾಲೀಕ ಈ ಘಟನೆಯನ್ನು ಕಂಡು ಆತಂಕಕ್ಕೆ ಒಳಗಾಗಿದ್ದು ಕಿಡಿಗೇಡಿಗಳು ಯಾರು ಎಂದು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸಾಗರ ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
Kshetra Samachara
29/12/2024 10:20 am