ಶಿವಮೊಗ್ಗ : ಕ್ಷಮಾ-ಅಹಂ ಎರಡು ಚಿಕ್ಕಪದಗಳು ಆದರೆ ಕ್ಷಮಾ ಅನುವುದು ಸಂಬಂಧಗಳನ್ನು ಉಳಿಸಿದರೆ, ಅಹಂ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳು ಮಾಡುತ್ತದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಹೊಸನಗರ ತಾಲೂಕಿನ ಗವಟೂರು ಹೊಳೆಸಿದ್ದೇಶ್ವರ ದೇವಸ್ಥಾನ ಸಮಿತಿಯವರು ಎಳ್ಳಾಮಾವಾಸ್ಯೆ ಅಂಗವಾಗಿ ಏರ್ಪಡಿಸಲಾದ ಹೊಳೆಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ರುದ್ರಾಭೀಷೇಕ ಧರ್ಮಸಭೆಯ ಭಾಗವಹಿಸಿ ಮಾತನಾಡಿದ ಅವರು ಜಗದ್ಗುರು ರೇಣುಕಾ ಭಗವತ್ಪಾದರು ಸಿದ್ದಾಂತ ಶಿಖಾಮಣಿಯಲ್ಲಿ ಧರ್ಮಸೂತ್ರಗಳನ್ನು ಭೋದಿಸುವಾಗ ಕ್ಷಮಾ ಗುಣ ಇದ್ದವರ ಬದುಕು ನಿಜವಾಗಿ ಶುದ್ದವಾಗಿರುತ್ತದೆಂದು ಹೇಳಿದರು.
Kshetra Samachara
31/12/2024 09:30 am