ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಕೇಂದ್ರ ಸರ್ಕಾರಿ ಯೋಜನೆಯಡಿ ತಾಲೂಕಿನ ವಿವಿಧ ಶಾಲೆಯ 1-7ನೇ ತರಗತಿ ಮಕ್ಕಳಿಗೆ ಉಚಿತ ಬ್ಯಾಗ್

ಸಾಗರ: ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಾಗರ ತಾಲೂಕಿನ ,ಸಕಿಪ್ರಾ ಶಾಲೆ ಬಾಳೆಗೆರೆ ,ಸಹಿಪ್ರಾ ಶಾಲೆ ಮುಂಗುಳೀಮನೆ,ಸಕಿಪ್ರಾ ಶಾಲೆ ಹಕ್ಕರೆ,ಸಹಿಪ್ರಾ ಶಾಲೆ ಬೆಂಕಟವಳ್ಳಿ,ಸಹಿಪ್ರಾ ಶಾಲೆ ಯಡಜಿಗಳೇಮನೆ,ಸಕಿಪ್ರಾ ಶಾಲೆ ವರದಹಳ್ಳಿ,ಸಹಿಪ್ರಾ ಶಾಲೆ ಬ್ರಾಹ್ಮಣ ಬೇದೂರು,ಸಹಿಪ್ರಾ ಶಾಲೆ ಕಲ್ಮನೆ,ಸಹಿಪ್ರಾ ಶಾಲೆ ಚಿಪ್ಳಿ ಲಿಂಗದಹಳ್ಳಿ,ಸಹಿಪ್ರಾ ಶಾಲೆ ಕಾಗೆಹಳ್ಳ, ಸಕಿಪ್ರಾ ಶಾಲೆ ಮಂಕಳಲೆ ಶಾಲೆಯ 1 ರಿಂದ 7 ನೇ ತರಗತಿ ಮಕ್ಕಳಿಗೆ ಗುರುವಾರ ಉಚಿತ ಬ್ಯಾಗ್ ವಿತರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ,ದಿಶಾ ಕಮಿಟಿಯ ಸದಸ್ಯ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ,ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಉಚಿತ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಇದೀಗ ಮೊದಲ ಹಂತದಲ್ಲಿ 1ನೇ ತರಗತಿಯಿಂದ 7ನೇ ತರಗತಿಯ ವರೆಗಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ .

ಮುಂದಿನ ದಿನಗಳಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೂ ಉಚಿತ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಿಶಾ ಕಮಿಟಿಯ ಸದಸ್ಯರಾದಂತಹ ಸುವರ್ಣಟೀಕಪ್ಪನವರು ಮತ್ತು ಗ್ರಾಪಂ ಅಧ್ಯಕ್ಷರು/ ಸದಸ್ಯರುಗಳು ಮತ್ತು SDMC ಅಧ್ಯಕ್ಷರು/ಸದಸ್ಯರುಗಳು ಹಾಗೂ ಊರಿನ ಗ್ರಾಮಸ್ಥರು ಜೊತೆಗೆ ಪಾಲ್ಗೊಂಡಿದ್ದರು.

Edited By : PublicNext Desk
PublicNext

PublicNext

02/01/2025 09:10 pm

Cinque Terre

33.43 K

Cinque Terre

0

ಸಂಬಂಧಿತ ಸುದ್ದಿ