ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಲಕ್ಷಾಂತರ ಮೌಲ್ಯದ ಸಾಗುವಾನಿ ಮರಗಳ ಕಡಿತಲೆ- ನಾಟ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗದ ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಅರಸಾಳು ಗ್ರಾಮದ ಸರ್ವೆ ನಂ.94ರ ಅರಣ್ಯ ಪ್ರದೇಶದಲ್ಲಿ ಮರಗಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವ ಘಟನೆ ನಡೆದಿದೆ.

ಅರಸಾಳು ವ್ಯಾಪ್ತಿಯ ಮಾಣಿಕೆರೆ ಗ್ರಾಮದಲ್ಲಿ ಆನೆಗಳ ನಿಗ್ರಹಕ್ಕಾಗಿ ತೆಗೆದಿರುವ ಬೃಹದಾಕಾರದ ಟ್ರಂಚ್ ದಾಟಿ ದಟ್ಟಾರಣ್ಯದಲ್ಲಿ 70 ರಿಂದ 80 ವರ್ಷದ ಬೃಹದಾಕಾರದ 5 ಮರಗಳನ್ನು ಕಳ್ಳರು ಕಡಿದಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದಿರುವ ಮಾಹಿತಿ ಅರಿತ ಅರಣ್ಯಾಧಿಕಾರಿಗಳು ಮರ ಕಡಿದಿರುವ ಸ್ಥಳವನ್ನು ಪತ್ತೆ ಹಚ್ಚಿದಾಗ ಬೃಹದಾಕಾರದ ಒಟ್ಟು 5 ಸಾಗುವಾನಿ ಮರಗಳನ್ನು ಕಡಿದಿರುವುದು ಕಂಡುಬಂದಿದೆ. ಬೇರೆಡೆಗೆ ಸಾಗಿಸಲು ತಯಾರಿ ಮಾಡಿಟ್ಟಿದ್ದ 18 ತುಂಡುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. 80 ಅಡಿಗೂ ಅಧಿಕ ನಾಟವಿರುವುದಾಗಿ ಅಂದಾಜಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಶರಣಪ್ಪ, ಡಿಆರ್ ಎಫ್ಒ ಮಹೇಶ್ ನಾಯ್ಕ, ಅರಣ್ಯ ರಕ್ಷಕ ಕುಮಾರ್ ಮಾಂಗ್, ಅನಿಲ್‌ ಇತರ ಸಿಬ್ಬಂದಿಯಿದ್ದರು.

Edited By : Ashok M
PublicNext

PublicNext

05/01/2025 07:47 am

Cinque Terre

29.69 K

Cinque Terre

0

ಸಂಬಂಧಿತ ಸುದ್ದಿ