ಶಿವಮೊಗ್ಗ: ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ಕಹಿ ಸ್ವೀಟ್ ಕೊರಿಯರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸೌಹಾರ್ದ್ ಪಟೇಲ್ ಎಂಬ ಭದ್ರಾವತಿ ಯುವಕನನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಕಾನೂನು ಕಾಲೇಜಿನಲ್ಲಿ ಓದುವಾಗ ಹುಡುಗಿಯನ್ನು ಸೌಹಾರ್ಧ ಪಟೇಲ್ ಪ್ರೀತಿಸುತ್ತಿದ್ದನಂತೆ. ಆಗ ಸೌಹರ್ದ್ ಗೆ ಕರೆದು, ಎನ್.ಇ.ಎಸ್. ಸಂಸ್ಥೆ ಸೆಕ್ರೆಟರಿ ನಾಗರಾಜ್, ಬುದ್ಧಿವಾದ ಹೇಳಿದ್ದರಂತೆ.
ಅಲ್ಲದೇ, ಸೌಹಾರ್ದ್ ಪಟೇಲ್ ಅವರ ತಂದೆ ತಾಯಿ ಬಳಿ ವಿಷಯ ಮಾತನಾಡಿ ಆ ಹುಡುಗಿ ತಂಟೆಗೆ ಹೋಗದಂತೆ ನಾಗರಾಜ್ ನೋಡಿಕೊಂಡಿದ್ದರಂತೆ. ಬಳಿಕ ಹುಡುಗಿ ಬೇರೆಯೊಬ್ಬರ ಜೊತೆ ಮದುವೆಯಾದಾಗ ಈತನಿಗೆ ನಾಗರಾಜ್ ಮೇಲೆ ದ್ವೇಷ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರಾಜ್ ಗೆ ಕಹಿ ಸ್ವೀಟ್ ಬಾಕ್ಸ್ ರವಾನೆ ಮಾಡಿದ್ದ ಸೌಹಾರ್ದ್, ಕೆಲವು ಮಾತ್ರೆಗಳನ್ನು ಪುಡಿ ಮಾಡಿ ಸಿಹಿ ಉದುರಿಸಿ ಕಳಿಸಿದ್ದನಂತೆ.
ಐಡಿಯಾ ಬಂದಿದ್ದು ಹೇಗೆ ?
ಕಾರ್ಯಕ್ರಮವೊಂದರಲ್ಲಿ ಡಾ.ಸರ್ಜಿ ಮತ್ತು ನಾಗರಾಜ್ ಅವರನ್ನ ನೋಡಿದ ಪಟೇಲ್ ಗೆ ಅವರ ಭಾಷಣದ ಬಗ್ಗೆನೂ ದ್ವೇಷ ತುಂಬಿಸಿಕೊಂಡಿದ್ದು, ಇವರ ವಿರುದ್ಧ ದ್ವೇಷದ ಹಿನ್ನಲೆಯಲ್ಲಿ ಮಾತ್ರೆಗಳನ್ನ ಖರೀದಿಸಿ, ನಾಗರಾಜ್ ಮತ್ತು ಇತರೆ ಇಬ್ಬರು ವೈದ್ಯರಿಗೆ ಸ್ವೀಟ್ ಮೇಲೆ ಮಾತ್ರೆಗಳನ್ನ ಉದುರಿಸಿ ಕಳುಹಿಸಿದ್ದನಂತೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಡಾ. ಸರ್ಜಿ ಫ್ಯಾನ್ ಫಾಲೋ ಸಹ ಆಗಿದ್ದ ಈ ಪಟೇಲ್, ಕಾನೂನು ವ್ಯಾಸಾಂಗ ಕೂಡ ಮಾಡಿದ್ದ. ಇದೀಗ ಕೋಟೆ ಪಿಐ ಹರೀಶ್ ಪಟೇಲ್ ನೇತೃತ್ವದ ತಂಡ ಈತನನ್ನ ಬಂಧಿಸಿ, ಜೈಲಿಗೆ ಕಳಿಸಿದೆ.
Kshetra Samachara
06/01/2025 07:31 am