ಶಿವಮೊಗ್ಗ: ಕಬ್ಬು, ಎಳ್ಳು, ಬೆಲ್ಲ ಕೊಟ್ಟು ವಿದ್ಯಾರ್ಥಿಗಳು ಸುಗ್ಗಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮಲೆನಾಡಿನ ಶಿವಮೊಗ್ಗದ ಕಾಲೇಜಿನಲ್ಲಿ ಹಿಗ್ಗಿ ಬರುತ್ತಿರುವ ಸುಗ್ಗಿ ಕಾಲವನ್ನು ಸಂಭ್ರಮದಿಂದ ಸ್ವಾಗತಿಸಿದರು.
ಶಿವಮೊಗ್ಗ ನಗರದ ಎಸ್.ಆರ್ ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮವು ಜನಪದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ತಳಿರು ತೋರಣ ಚಪ್ಪರದಿಂದ ಸಿಂಗಾರಗೊಂಡಿದ್ದ ಕಾಲೇಜಿನ ಆವರಣದಲ್ಲಿ, ಕಬ್ಬುಗಳನ್ನು ಜೋಡಿಸಿ ಭತ್ತದ ರಾಶಿಯನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿದರು.
ನಡು ಅಕಾಡದ ಚಕ್ರವರ್ತಿ ಶಿವಮೊಗ್ಗದ ಶ್ರೀ ನಂದಿ ಹೋರಿ ಮತ್ತು ಗೊಂದಿ ಚಟ್ನಳ್ಳಿಯ ಭೈರವ ಹೋರಿಗಳು ನೋಡುಗರನ್ನು ಆಕರ್ಷಿಸಿತು. ವಿವಿಧ ಬಗೆಯ ರಂಗೋಲಿ ವಿನ್ಯಾಸಗಳು, ಹಳ್ಳಿ ಹೈದರಂತೆ ಬಂದಿದ್ದ ವಿದ್ಯಾರ್ಥಿಗಳು ಧೋತಿ, ಪಂಚೆಯಲ್ಲಿ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದರು.
ಒಟ್ಟಾರೆ ಮಲೆನಾಡಿನ ಕಾಲೇಜು ವಿದ್ಯಾರ್ಥಿಗಳು ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಸೆಲ್ಪಿ ತೆಗೆದುಕೊಂಡು ಖುಷಿಪಟ್ಟರು. ಇನ್ನು ವಿವಿಧ ಗೀತೆಗಳಿಗೆ ಸಖತ್ ಸ್ಟೇಪ್ ಹಾಕಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಭ್ರಮಿಸಿದರು.
ವೀರೇಶ್ ಜಿ ಹೊಸೂರ್, ಪಬ್ಲಿಕ್ ನೆಕ್ಸ್ಟ್. ಶಿವಮೊಗ್ಗ
PublicNext
07/01/2025 09:26 pm