ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ನಾ ಡಿಸೋಜ ರವರ ಅಂತಿಮ ದರ್ಶನ ಪಡೆದ ಸಂಸದ ಬಿ ವೈ ರಾಘವೇಂದ್ರ

ಸಾಗರ: ರಾಜ್ಯದ ಹಿರಿಯ ಸಾಹಿತಿ ಡಾ ನಾ ಡಿಸೋಜ ರವರ ಅಂತಿಮ ದರ್ಶನವನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹಾಗೂ ಎಂ.ಎಲ್.ಸಿ ಡಾ ಸರ್ಜಿ ಸೋಮವಾರ ಸಾಗರದ ನೆಹರೂ ನಗರದಲ್ಲಿ ಇರುವ ನಾ ಡಿಸೋಜ ರವರ ನಿವಾಸದಲ್ಲಿ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ, ನಾ ಡಿಸೋಜ ರವರ ನಿಧನ ತುಂಬಲಾರದ ನೋವು. ನಾ. ಡಿಸೋಜರವರು ಅನೇಕ ಕಾದಂಬರಿಗಳನ್ನು ಬರೆದಿದ್ದಾರೆ, ಇದರ ಜೊತೆಗೆ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದು ಶರಾವತಿ ಸಂತ್ರಸ್ತರ ಹೋರಾಟದಲ್ಲೂ ಕೂಡ ಭಾಗಿಯಾಗಿದ್ದರು ನಾನು ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ಹಿರಿಯ ಸಾಹಿತಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)

Edited By : PublicNext Desk
Kshetra Samachara

Kshetra Samachara

06/01/2025 06:17 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ