ಶಿವಮೊಗ್ಗ : ಮಲೆನಾಡು ಶಿವಮೊಗ್ಗದಲ್ಲೂ ಹೆಚ್‌ಎಂಪಿ ವೈರಸ್ ಪತ್ತೆಯಾಗಿದ್ದು ಐವರು ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಇನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ದಾಖಲಾಗಿದ್ದ ಐವರು ಮಕ್ಕಳಲ್ಲಿ ಈ ವೈರಸ್ ಪತ್ತೆಯಾಗಿದೆ.
ಇನ್ನು ಈ ಸಂಬಂಧ ಎಂಎಲ್ ಸಿ ಹಾಗೂ ವೈದ್ಯ ಡಾ.ಧನಂಜಯ್ ಸರ್ಜಿ ಪ್ರತಿಕ್ರಿಯೆ ನೀಡಿದ್ದು ಹೆಚ್ಎಂಪಿ ವೈರಸ್ ಬಗ್ಗೆ ಯಾರು ವರಿ ಮಾಡುವ ಅವಶ್ಯಕತೆ ಇಲ್ಲ, ಕಾಮನ್ ಆಗಿ ಬಂದು ಹೋಗುವ ವೈರಸ್ ಇದಾಗಿದೆ. ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆ ಟೆಸ್ಟ್ ಮಾಡಲಾಗಿತ್ತು. ಇದರಲ್ಲಿ ಐದು ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬಂದಿತ್ತು. ಈ ವೈರಸ್ ಯಾವುದೇ ತೊಂದರೆ ಮಾಡುವುದಿಲ್ಲ.
ಇದೀಗ ಎಲ್ಲಾ ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ. ಟೆಸ್ಟ್ ಮಾಡಿದರೆ ಎಲ್ಲಾ ಮಕ್ಕಳಿಗೂ ಬರುತ್ತದೆ. ಹಾಗಾಗಿ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು. ಇನ್ನು 6 ತಿಂಗಳಿನಿಂದ 4 ವರ್ಷದೊಳಗಿನ ಮಕ್ಕಳಿಗೆ ವೈರಸ್ ಕಾಣಿಸಿಕೊಂಡಿತ್ತು, ಈಗ ಯಾವ್ದು ಪಾಸಿಟಿವ್ ಬಂದಿಲ್ಲ, ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಮಕ್ಕಳಿಗೆ ವೈರಸ್ ಬರೋದು ಸಾಮಾನ್ಯ ಎಂದರು.
PublicNext
07/01/2025 07:17 pm