ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ - ಡಾ.ರವಿಶಂಕರ ಉಡುಪ

ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ - ಡಾ.ರವಿಶಂಕರ ಉಡುಪ

ಶಿವಮೊಗ್ಗ : ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದ್ದು, ಜನಜಾಗೃತಿ ಮೂಲಕ ಕ್ಯಾನ್ಸರ್ ತಡೆಯಲು ಸಾಧ್ಯ ಎಂದು ಸಾಲೂರಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ. ರವಿಶಂಕರ ಉಡುಪ ಹೇಳಿದರು.

ಸಾಹಸ ಮತ್ತು ಸಂಸ್ಕೃತಿ ಅಕಾಡಮಿ ಶಿವಮೊಗ್ಗ, ಸೇವಾ ಭಾರತಿ ತೀರ್ಥಹಳ್ಳಿ ಸೇರಿದಂತೆ ವಿವಿಧ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ತೀರ್ಥಹಳ್ಳಿಯ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು

ಕ್ಯಾನ್ಸರ್ ಸಾಂಕ್ರಮಿಕ ರೋಗವಲ್ಲದಿದ್ದರೂ ಕೂಡ ಅದಕ್ಕಿಂತ ವೇಗವಾಗಿ ಕಾಣಿಸುತ್ತಿದೆ. ಇದಕ್ಕೆ ಆಧುನಿಕ ಜೀವನಶೈಲಿಯೇ ಕಾರಣವಾಗಿದೆ. ಶೇಕಡ 25ರಷ್ಟು ಅನುವಂಶೀಯತೆಯಿಂದ ಬಂದರೆ, ಶೇಕಡ 75ರಷ್ಟು ಸ್ವಯಂಕೃತ ಅಪರಾಧಗಳಿಂದಾಗಿ ಬರುತ್ತದೆ.ವ್ಯಸನಗಳು ಇದರ ರೂವಾರಿಗಳಾಗಿವೆ. ಕೆಟ್ಟ ಚಟಗಳಿಂದ ದೂರವಿದ್ದು, ಉತ್ತಮ ಜೀವನಶೈಲಿಯನ್ನು ರೂಪಿಸುವುದೊಂದೇ ಈ ಕಾಯಿಲೆ ಬರದಂತೆ ತಡೆಯಲು ಸಾಧ್ಯ ಎಂದರು.

Edited By : PublicNext Desk
Kshetra Samachara

Kshetra Samachara

29/12/2024 08:59 pm

Cinque Terre

920

Cinque Terre

0

ಸಂಬಂಧಿತ ಸುದ್ದಿ