ಸಾಗರ :ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಇರುವ ಹಜರತ್ ಖ್ವಾಜಾ ಸಯ್ಯದ್ ರಾಜ್ ಬಕ್ಷ್ ವಲಿಅಲ್ಲಾ ರವರ 546ನೇ ಉರುಸ್ ಕಾರ್ಯಕ್ರಮ ಬುಧವಾರ ರಾತ್ರಿ ಸಂಭ್ರಮದಿಂದ ಆಚರಿಸಲಾಯಿತು.
ಸಂಜೆ 7 ಗಂಟೆ ಸುಮಾರಿಗೆ ಬೆಳಗಾಂ ಜಿಲ್ಲೆಯ ಕುರ್ಚಿ ಶರೀಫ್ ದರ್ಗಾದ ಗುರುಗಳಾದ ಪೀರ್ ಸಯ್ಯದ್ ಮಕ್ಬೂಲ್ ಅಹ್ಮದ್ ಖಾದ್ರಿ ಪೀರ್ ರವರ ನೇತೃತ್ವದಲ್ಲಿ ದರ್ಗಾಕ್ಕೆ ಗಂಧ ಲೇಪನ ಮಾಡಿ ಫಾತೆಹಾ ಖ್ವಾನಿ ಮಾಡಲಾಯಿತು.
ನಂತರ ದರ್ಗಾದ ಮುಂಭಾಗದಲ್ಲಿ ಫಕೀರ್ ಗಳು ಜರಬ್ ಕಾರ್ಯಕ್ರಮ ನಡೆಸಿದ್ದು ನೋಡುಗರ ಗಮನ ಸೆಳೆಯುತ್ತು. ಎರಡು ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ನಂತರ ಕಮೇಟಿಯ ಅಧ್ಯಕ್ಷ ಅಕ್ಬರ್ ಅಲಿ ಖಾನ್ ಮಾತನಾಡಿದರು. ಈ ಸಂದರ್ಭದಲ್ಲಿ ಅಫೀಜುಲ್, ಸೈಫುಲ್ಲಾ, ಸೈಯದ್ ಜಾವೀದ್, ಅಯ್ವಭಬು ಖಾನ್, ರಫೀಕ್, ಸೈಯದ್ ಇರ್ಫಾನ್, ಇಸ್ಮಾಯಿಲ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)
Kshetra Samachara
08/01/2025 09:24 pm