ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಹಿರಿಯ ಸಾಹಿತಿ ಡಾ ನಾ. ಡಿಸೋಜಾ ಅಂತಿಮ ಯಾತ್ರೆ - ಗಾಂಧಿ ಮಂದಿರದಲ್ಲಿ ಸರ್ಕಾರಿ ಗೌರವ

ಸಾಗರ: ಕರ್ನಾಟಕದ ಹೆಸರಾಂತ ಹಿರಿಯ ಸಾಹಿತಿ ಡಾ. ನಾ ಡಿಸೋಜ ಭಾನುವಾರ ಸಂಜೆ ಚಿರನಿದ್ರೆಗೆ ಜಾರಿದ್ದಾರೆ. ಮಂಗಳವಾರ ಬೆಳಗ್ಗೆ ಡಿಸೋಜ ಅವರ ನಿವಾಸದಿಂದ ಅಂತಿಮ ಯಾತ್ರೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಸಾಗರ ನಗರಸಭೆಯ ಗಾಂಧಿ ಮೈದಾನಕ್ಕೆ ತರಲಾಗಿದೆ. ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸರ್ಕಾರದ ಆದೇಶದಂತೆ ಹಿರಿಯ ಸಾಹಿತಿ ಡಾ. ನಾ ಡಿಸೋಜ ಅವರಿಗೆ ಪೋಲಿಸ್ ಇಲಾಖೆಯಿಂದ ಸಕಲ ಗೌರವ ಸಲ್ಲಿಸಲಾಯಿತು.

ಹಿರಿಯ ಸಾಹಿತಿ ಡಾ. ನಾ ಡಿಸೋಜ ಅವರ ಅಂತಿಮ ದರ್ಶನವನ್ನು ಸಾಗರ ನಗರದ ಶಾಲಾ ಮಕ್ಕಳು ಜನಪ್ರತಿನಿಧಿಗಳು ಮಠಗಳ ಸ್ವಾಮೀಜಿಗಳು ಸೇರಿದಂತೆ ಅನೇಕರು ಪಡೆದುಕೊಂಡರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ರೈಸ್ತ ಸಮುದಾಯದ ಪದ್ಧತಿಯಂತೆ ಅಂತ್ಯ ಸಂಸ್ಕಾರ ನಡೆಯಲಿದೆ.

Edited By : Suman K
PublicNext

PublicNext

07/01/2025 01:51 pm

Cinque Terre

14.89 K

Cinque Terre

0

ಸಂಬಂಧಿತ ಸುದ್ದಿ