ಸೊರಬ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಅರಳಿಸಲು ಹಾಗೂ ಸುಪ್ತ ಪ್ರತಿಭೆಯ ಅನಾವರಣಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ಮುಖ್ಯಶಿಕ್ಷಕ ಅಜ್ಮತ್ ಡಿ. ಎ. ಹೇಳಿದ್ದಾರೆ.
ಪಟ್ಟಣದ ರೆಡಿಯನ್ಸ್ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಮಾಡೆಲ್‌ಗಳನ್ನು ಪ್ರದರ್ಶಿಸಿದ್ದಾರೆ. ವೈಜ್ಞಾನಿಕ ಮನೋಭಾವ ಅನಾವರಣಕ್ಕೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ. ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಮತ್ತು ಪರಿಸರ ಕಾಳಜಿ ಅತ್ಯಂತ ಅವಶ್ಯಕವಾಗಿದೆ. ಕ್ರಿಯಾತ್ಮಕ ಮನೋಶಕ್ತಿಗೆ ಉತ್ತೇಜನ ನೀಡಲಾಗುತ್ತಿದೆ.
ಇದು ವೈಜ್ಞಾನಿಕ ವಿಷಯಗಳನ್ನು ಅಭಿವ್ಯಕ್ತಿಗಳಿಸಲು ಸಹಕಾರಿಯಾಗುತ್ತದೆ. ಜಗತ್ತಿನ ನಾಗರಿಕತೆಯ ಮೇಲೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವ ಅಪಾರವಾಗಿದೆ. ದೇಶವು ವಿದೇಶಿ ಅವಲಂಬನೆಯನ್ನು ಕಡಿಮೆಗೊಳಿಸಿ ಸ್ವಾವಲಂಬಿಯಾಗಿ ಹೊರಹೊಮ್ಮುತ್ತಿದೆ ಎಂದರು.
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಳೆ ನೀರು ಕೊಯ್ಲು, ಕೃಷಿ ಪದ್ಧತಿ, ಹೆದ್ದಾರಿಗಳು, ಅಂತರ್ಜಲ ರಸ್ತೆ ಮಾರ್ಗ, ಸ್ಮಾರ್ಟ್ ಸಿಟಿ, ಪರಿಸರ ಮಾಲಿನ್ಯ ನಿಯಂತ್ರಣ, ಆಹಾರದ ಜೀರ್ಣಕ್ರಿಯೆ ವ್ಯವಸ್ಥೆ, ಸೂರ್ಯ-ಚಂದ್ರ ಗ್ರಹಣ, ಸೋಲಾರ್ ಬಳಕೆ, ಬೆಳಕಿನ ಶಕ್ತಿ ಬಳಕೆ, ಮನುಷ್ಯರ ಜೀವನ ಶೈಲಿ, ಪ್ರಾಕೃತಿಕ ಸಂಪತ್ತು ರಕ್ಷಣೆ, ಬಣ್ಣಗಳ ವರ್ಗೀಕರಣ ಹೀಗೆ ಸುಮಾರು ನೂರಾರು ಬಗೆಯ ಮಾದರಿಗಳನ್ನು ಪ್ರದರ್ಶಿಸಿದರು.
ವಿಶೇಷವಾಗಿ ಜಾಗತಿಕ ತಾಪಮಾನವೃದ್ಧಿ ಹಾಗೂ ಆಹಾರದ ಜೀರ್ಣ ಕ್ರಿಯೆ ವ್ಯವಸ್ಥೆ ಮಾದರಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಮಾದರಿಗಳ ಕುರಿತು ಉತ್ತಮವಾಗಿ ವಿವರಣೆ ನೀಡಿದರು.
ಶಂಶಾದ್ ಬೇಗಂ ಕಾರ್ಯಕ್ರಮ ಉದ್ಘಾಟಿಸಿದರು. ಬಶೀರ್ ಕೊಡ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನೂರ್ ಮಹಮ್ಮದ್, ಕಾರ್ಯದರ್ಶಿ ಶಹಾಬುದ್ದೀನ್, ಶಿಕ್ಷಕರಾದ ರುಕಿಯಾ ಬಾನು, ಶಮೀಮ್ ಬಾನು, ಸಾಧಿಯ, ಮುಸ್ಕನ್, ನಸ್ರೀನ್. ಪೋಷಕರಾದ ಸೈಫುಲ್ಲಾ, ಉಜ್ಮ ಆರಾ, ಅಮಾನುಲ್ಲಾ, ಶಾಂಶಾದ್ ಬೇಗಂ, ಆಸ್ಮ ಪರ್ವೀನ್, ಅರ್ಶಾದ್ ಅಯೂಬ್, ಮನ್ಸೂರ್ ಅಹ್ಮದ್, ಆಸೀಫಾ ಪರ್ವೀನ್, ಉಪಸ್ಥಿತರಿದ್ದರು.
ವರದಿ: ಮಧು ರಾಮ್ ಪಬ್ಲಿಕ್ ನೆಕ್ಸ್ಟ್ ಸೊರಬ
PublicNext
01/01/2025 02:09 pm