ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೊರಬ: ಅತ್ಯುತ್ತಮ ರಂಗನಟಿ ಪ್ರಶಸ್ತಿ ಪಡೆದ ಸಹನಾ & ಕ್ಲೇ ಮಾಡೆಲಿಂಗ್ ಪ್ರತಿಭೆ ಶ್ರೇಯಸ್ ಗೆ ಸನ್ಮಾನ

ಸೊರಬ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವತಿಯಿಂದ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಶಿಕಾರಿಪುರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ರಂಗನಟಿ ಪ್ರಶಸ್ತಿ ಪಡೆದ ಬಿಸಿಎ ವಿದ್ಯಾರ್ಥಿನಿ ಸಹನಾ ಮತ್ತು ಬೆಂಗಳೂರಿನಲ್ಲಿ ನಡೆದ ಅಂತರ್ ವಿವಿ ಕ್ಲೇ ಮಾಡೆಲಿಂಗ್ ದಕ್ಷಿಣ ಭಾರತ ಮಟ್ಟದ ಪ್ರತಿಭಾ ಸ್ಪರ್ಧೆಯಲ್ಲಿ ಕುವೆಂಪು ವಿವಿ ಪರವಾಗಿ ಭಾಗವಹಿಸಿದ ಸೊರಬ ಕಾಲೇಜಿನ ಬಿಕಾಂ ವಿದ್ಯಾರ್ಥಿ ಶ್ರೇಯಸ್ 4ನೇ ಸ್ಥಾನ ಪಡೆದು ಕಾಲೇಜಿಗೆ ಮತ್ತು ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಈ ಬಗ್ಗೆ ಸಹನಾ ಮತ್ತು ಶ್ರೇಯಸ್ ಅವರಿಗೆ ಕಾಲೇಜಿನ ವತಿಯಿಂದ ನಡೆದ ಅಭಿನಂದನೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಪ್ರಾಂಶುಪಾಲೆ ಡಾ. ನೇತ್ರಾವತಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಗಮನ ನೀಡಿದರೆ ಸಾಲದು. ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿ ಸಕ್ರಿಯವಾಗಿ ಭಾಗವಹಿಸಿದಾಗ ಸಾಧನೆ ಮಾಡಲು ಸಾಧ್ಯ. ಇವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.

ಸಹನಾ ಮತ್ತು ಶ್ರೇಯಸ್ ಪೋಷಕರು, ಕಾಲೇಜಿನ ಬೋಧಕ ಸಿಬ್ಬಂದಿ ಪವಿತ್ರ, ಆಸ್ಮಾ, ಕಾವ್ಯ, ಡಾ.ಜಿ.ಅರ್.ಜೋಶಿ, ಡಾ.ಮಹೇಶ್ವರಿ, ಆಶಾ ಗೌಡರ್, ನೇಂದ್ರಪ್ಪ, ಯೋಗೀಶ್, ಮಂಜುನಾಥ್, ಶಂಕರ್ ನಾಯ್ಕ್, ರಾಘವೇಂದ್ರ, ಚಂದ್ರಪ್ಪ, ಪ್ರಮೋದ್, ರಾಘವೇಂದ್ರ, ರವಿ, ಮಾದೇಶ್, ಹಬೀಬುಲ್ಲ, ಮಮತ ನಾಯ್ಕ್, ಕೊಟ್ರೇಶ್, ಮಂಜುಳಾ, ಮಿಲನ, ರವಿ ಹೆಗಡೆ, ಪ್ರಶಾಂತ್ ಹೆಗಡೆ, ಗುರುದತ್ತ, ಚರಣ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

05/01/2025 07:05 pm

Cinque Terre

44.89 K

Cinque Terre

0

ಸಂಬಂಧಿತ ಸುದ್ದಿ