ದೊಡ್ಮನೆಯಲ್ಲಿ ತಮ್ಮ ಗಾಯನದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯತೆ ಪಡೆದಿರುವವನು ಹನುಮಂತು. ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. 14ನೇ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಇದ್ದ ಪ್ರಯುಕ್ತ ಹನುಮಂತನ ತಂದೆ ಮೇಘಪ್ಪ ಹಾಗೂ ತಾಯಿ ಶೀಲವ್ವ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು.
ಬಿಗ್ ಬಾಸ್ ಮನೆಯೊಳಗೆ ಬಂದ ಕೂಡಲೇ ಮಗ ಹನುಮಂತನನ್ನ ನೋಡಿ ಶೀಲವ್ವ ಹನುಮನನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. . ದೊಡ್ಡದಿರುವ ಬಿಗ್ ಬಾಸ್ ಮನೆಯನ್ನು ನೋಡಿ, ನಾವು ಯಾವಾಗ ಕಟ್ಟಿಸೋಣ ಈ ತರಹದ ಮನೆ? ನಮ್ಮ ಮನೆ? ಅಂತ ಮಗನಿಗೆ ತಾಯಿ ಶೀಲವ್ವ ಕೇಳಿದರು. ಅವಾಗ ಹನುಮಂತು ಮುಗುಳುನಗೆಯನ್ನು ಬೀರುತ್ತಾರೆ. ಕಂತು ಕಟ್ಟೋದು ಬಂದಿತ್ತು. ಕಂತು ಕಟ್ಟಿಲ್ಲ. ಹಣ ಇರ್ಲಿಲ್ಲ ಎಂದು ತಮ್ಮ ಮಗನ ಬಳಿ ಸಂಕಟ ತೋಡಿಕೊಂಡರು ತಾಯಿ ಶೀಲವ್ವ. ಇದನ್ನು ನೋಡಿದ ಹನುಮಂತು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
PublicNext
06/01/2025 08:34 pm