ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹ-ಮಾಲೀಕರಾಗಿ ಯುರೋಪಿಯನ್ T20 ಪ್ರೀಮಿಯರ್ ಲೀಗ್‌ಗೆ ಸೇರಿದ ಅಭಿಷೇಕ್ ಬಚ್ಚನ್

ಬಾಲಿವುಡ್ ನಟ, ಉದ್ಯಮಿ ಮತ್ತು ಕ್ರೀಡಾ ಉತ್ಸಾಹಿ ಅಭಿಷೇಕ್ ಬಚ್ಚನ್ ಅವರು ಯುರೋಪಿಯನ್ T20 ಪ್ರೀಮಿಯರ್ ಲೀಗ್ (ETPL)ಗೆ ಸಹ-ಮಾಲೀಕರಾಗಿ ಸೇರಿಕೊಂಡಿದ್ದಾರೆ. ಲೀಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮತಿ ನೀಡಿದೆ.

ICC-ಅನುಮೋದಿತ ETPL ಜುಲೈ 15 ರಿಂದ ಆಗಸ್ಟ್ 3ರವರೆಗೆ ಪ್ರಾರಂಭವಾಗಲಿದೆ ಮತ್ತು ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಒಳಗೊಂಡಿರುತ್ತದೆ.

"ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಇದು ಗಡಿಗಳನ್ನು ಮೀರಿದ ಏಕೀಕರಣ ಶಕ್ತಿಯಾಗಿದೆ. ಕ್ರಿಕೆಟ್‌ನ ಬೆಳೆಯುತ್ತಿರುವ ಜಾಗತಿಕ ಆಕರ್ಷಣೆಯನ್ನು ಪ್ರದರ್ಶಿಸಲು ETPL ಸೂಕ್ತ ವೇದಿಕೆಯಾಗಿದೆ" ಎಂದು ಅಭಿಷೇಕ್ ಹೇಳಿದ್ದಾರೆ.

Edited By : Vijay Kumar
PublicNext

PublicNext

06/01/2025 08:22 pm

Cinque Terre

60.74 K

Cinque Terre

0