ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಲಿವುಡ್ ಮಾತ್ರವಲ್ಲ, ಬಾಲಿವುಡ್ ದಾಖಲೆಗಳನ್ನೂ ಮುರಿದ ಪುಷ್ಪ 2

ಪುಷ್ಪ- 2 ಸಿನಿಮಾ ರಿಲೀಸ್ ಆಗಿ ಒಂದು ತಿಂಗಳಾಗಿದೆ. ಆದರೂ ಹಲವೆಡೆ ಚಿತ್ರಮಂದಿರಗಳು ಭರ್ತಿಯಾಗಿವೆ. ವೀಕೆಂಡ್ ಬಂತೆಂದರೆ ಸಾಕು ಕಲೆಕ್ಷನ್ಸ್ ಹೈಕ್ ಅಗುತ್ತಿದೆ. ಕಳೆದ 30 ದಿನಗಳಿಂದ ಭಾರತದಾದ್ಯಂತ ಪುಷ್ಪ- 2 ಸಿನಿಮಾದ ಅಲೆ ಚಿತ್ರಮಂದಿರಗಳಿಗೆ ಅಪ್ಪಳಿಸಿದೆ.

ಎಷ್ಟೇ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿದ್ದರೂ ಪುಷ್ಪ- 2 ಆಚೆಗೆ ಸದ್ದು ಕಡಿಮೆಯಾಗುತ್ತಿಲ್ಲ. ಎಲ್ಲಾ ಪ್ರದೇಶಗಳಲ್ಲಿ ಪುಷ್ಪ2 ಸಿನಿಮಾ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಹಿಂದಿಯಲ್ಲಿ ಬಿಡುಗಡೆಯಾದ ಕೇವಲ 15 ದಿನಗಳಲ್ಲಿ ಸೂಪರ್‌ ಹಿಟ್ ಆಗಿವೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಿನಿಮಾ 800 ಕೋಟಿ ಕ್ಲಬ್ ಸೇರಿತ್ತು. ತೆಲುಗು ಡಬ್ಬಿಂಗ್ ಸಿನಿಮಾ ಹಿಂದಿಯಲ್ಲಿ 800 ಕೋಟಿ ಹಣ ಬಾಚಿದೆ.

Edited By : Suman K
PublicNext

PublicNext

06/01/2025 08:27 pm

Cinque Terre

29.07 K

Cinque Terre

0