ಶಿವಮೊಗ್ಗ : ಮಲೆನಾಡಿನ ಹಿರಿಯ ಸಾಹಿತಿ ಡಾ. ನಾ.ಡಿಸೋಜ ನಿಧನಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಹೆಮ್ಮೆಯ ಸಾಹಿತಿಗಳು ನಿಧನದ ವಿಷಯ ಕೇಳಿ ಬಹಳ ಬೇಜಾರ್ ಆಯ್ತು, ಈ ನಾಡು ಕಂಡತಹ ಮಹಾನ್ ಸಾಹಿತಿ ಅತ್ಯಂತ ಯಶಸ್ವಿಯಾಗಿ ಸಾಹಿತಿ ಕ್ಷೇತ್ರಕ್ಕೆ ಕೊಡುಗೆ ಕೊಟ್ಟವರು ನಾ.ಡಿಸೋಜ ಅವರು, ಡಿಸೋಜ ಅವರು 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು, ರಾಜ್ಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ರು, ಅವರು ಇಲ್ಲ ಅನ್ನೋದು ಬಹಳ ನೋವು ತಂದಿದೆ, ಅವರ ರಚಿಸಿದ ಕೃತಿಗಳು ಕೆಲವು ಸಿನಿಮಾ ಅಗಿವೆ, ಅವರು ರೈಲ್ವೆ ಹೋರಾಟ, ಪರಿಸರದ ಬಗ್ಗೆ ಕಾಳಜಿ ಇದ್ದ ಸಾಹಿತಿ ಆಗಿದ್ದರು.
ಡಿಸೋಜಗಳ ಬರಹಗಳು ಸಿನಿಮಾಗಳಾಗಿ ಬಂದಿದೆ, ನಾನು ಸಣ್ಣ ವನಿಂದಾಗಿಲಿಂದಲೂ ಅವರನ್ನ ನೋಡಿಕೊಂಡು ಬೆಳೆದಿದ್ದೇನೆ ಸಜ್ಜನ ವ್ಯಕ್ತಿ ಡಿಸೋಜ ಡಿಸೋಜರ ಸಾವು ನಾಡಿಗೆ ಬಹಳ ದೊಡ್ಡ ನಷ್ಟವಾಗಿದೆ ಎಂದರು.
PublicNext
06/01/2025 01:33 pm