ರಿಪ್ಪನ್‌ಪೇಟೆ : ಯಡೇಹಳ್ಳಿಯಿಂದ ರಿಪ್ಪನ್‌ಪೇಟೆ ವರೆಗಿನ ಸಂಪರ್ಕ ರಸ್ತೆಗೆ 20 ಕೋಟಿ ರೂ. ವೆಚ್ಚದ 8 ಕಿ.ಮೀ. ದೂರದ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗೆ ಶಾಸಕ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
ನಂತರ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಶಂಕುಸ್ಥಾಪನಾ ಸಮಾರಂಭದ ಸಭೆಯಲ್ಲಿ ಮಾತನಾಡಿ, ಟೀಕೆ ಟಿಪ್ಪಣಿಗಳು ಸತ್ತುಹೋಗುತ್ತವೆ. ಮಾಡಿದ ಅಭಿವೃದ್ದಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ. ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧ ಪಕ್ಷದವರು ಬಾಯಿ ಬಡಿದುಕೊಳ್ಳುತ್ತಿದ್ದು ಇದರಿಂದ ನಮ್ಮ ಸರ್ಕಾರಕ್ಕೆ ಇನ್ನಷ್ಟು ಅಭಿವೃದ್ಧಿಗೆ ಹಣ ಹರಿದು ಬರುತ್ತಿರುವುದರೊಂದಿಗೆ ಗ್ಯಾರಂಟಿ ಯೋಜನೆಯಿಂದಾಗಿ ರೈತ ಮಹಿಳೆಯರು ಬಡವರು ದೀನ ದಲಿತರು ಉದ್ದಾರವಾಗುವಂತಾಗಿದೆ.
ಬಡವರ ಕಣ್ಣೀರು ಹಾಕಿಸುವ ಮೂಲಕ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಲಕ್ಷಾಂತರ ಕೋಟಿ ರೂ. ಸಾಲ ಮಾಡಿ ಖಜಾನೆ ಖಾಲಿ ಮಾಡಿತ್ತು ನಮ್ಮ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲವನ್ನು ತೀರಿಸುವ ಮೂಲಕ ಅಭಿವೃದ್ದಿಗೂ ಹಣದ ಹೊಳೆ ಹರಿಸುತ್ತಿದ್ದಾರೆಂದರು.
Kshetra Samachara
07/01/2025 05:45 pm