ಶಿವಮೊಗ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಚಾರ ವ್ಯವಸ್ಥೆಯ ದರಪಟ್ಟಿಯನ್ನು ಹೆಚ್ಚಳ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರ ಇಳಿಕೆಗಾಗಿ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೆ.ಎಸ್.ಆರ್.ಟಿ.ಸಿ.ಸಾರಿಗೆ ಸಂಚಾರ ವ್ಯವಸ್ಥೆಯಲ್ಲಿ ಇದ್ದಕ್ಕಿದ್ದಂತೆ ದರವನ್ನು ಹೆಚ್ಚಿಸಿರುವುದರಿಂದ ರಾಜ್ಯದ ನಾಗರಿಕರಿಗೆ ಹೊರೆಯಾಗಿದ್ದು, ಮಧ್ಯಮ ಹಾಗೂ ಕೆಳವರ್ಗದ ಜನಸಾಮಾನ್ಯರಿಗೆ ಮತ್ತು ದಿನನಿತ್ಯ ಕೂಲಿಯನ್ನು ಆರಿಸಿ ಜೀವನ ನಡೆಸುವವರಿಗೆ ಹಾಗೂ ರಾಜ್ಯದ ನಾನಾ ಭಾಗಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಜೀವನ ನಡೆಸುವುದೇ ಕಷ್ಟಕರವಾದ ಸಂದರ್ಭದಲ್ಲಿ ಇದೊಂದು ಹೆಚ್ಚಿನ
ಹೊರೆಯಾಗಿದ್ದು, ಕೂಡಲೇ ಬಸ್ ಟಿಕೇಟ್ ದರವನ್ನು ಕಡಿತಗೊಳಿಸಿ ಎಂದಿನಂತೆ ಮೊದಲಿನ ದರವನ್ನೇ ನಿಗಧಿಪಡಿಸಬೇಕು ಎಂದು ನಾಗರಿಕರ ಪರವಾಗಿ ಆಮ್ ಆದ್ಮಿ ಪಾರ್ಟಿ ಆಗ್ರಹ ಪಡಿಸಿದೆ. ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
Kshetra Samachara
07/01/2025 04:05 pm