ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಬಾಹ್ಯಾಕಾಶದಿಂದ ಬಿತ್ತು ದೊಡ್ಡ ಲೋಹದ ಉಂಗುರ - ಗ್ರಾಮಸ್ಥರಲ್ಲಿ ಏಲಿಯನ್ ಆತಂಕ..!

ಕೀನ್ಯಾ : ಅನ್ಯಗ್ರಹ ಜೀವಿಗಳು ಇವೆ, ಹಲವೆಡೆ ಕಾಣಸಿಕ್ಕಿವೆ ಎಂಬ ಸುದ್ದಿಗಳನ್ನ ನೋಡಿರ್ತಿರಾ..!ಏಲಿಯನ್ ಕುರಿತು ಹಲವು ಅಧ್ಯಯನ ನಡೆದರೂ ಸ್ಪಷ್ಟತೆ ಇಲ್ಲ, ಇದರ ನಡುವೆ ಕೀನ್ಯಾ ಗ್ರಾಮದ ಜನರು ಭಾರಿ ಆತಂಕಗೊಂಡ ಘಟನೆ ನಡೆದಿದೆ.

ಆಗಸದಿಂದ ಏಕಾಏಕಿ ಲೋಹದ ಉಂಗುರ ಆಕಾರವೊಂದು ಭೂಮಿಗೆ ಬಿದ್ದಿದೆ. ಭಾರಿ ಶಬ್ದ ಕೇಳಿ ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ಮಾಹಿತಿ ತಿಳಿದು ಹಲವು ಅಧಿಕಾರಿಗಳ ತಂಡ ಕೀನ್ಯಾದ ಮುಕುಕು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಇದೇ ವೇಳೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ಕೂಡ ಸ್ಥಳಕ್ಕೆ ಧಾವಿಸಿ ಅಧ್ಯಯನ ಆರಂಭಿಸಿದೆ.

ಸುಮಾರು 2.5 ಮೀಟರ್ ವ್ಯಾಸ ಮತ್ತು 500 ಕೆ.ಜಿ ತೂಕದ ದೊಡ್ಡ ಲೋಹದ ಉಂಗುರವು ಕೀನ್ಯಾದಲ್ಲಿ ಆಕಾಶದಿಂದ ಬಿದ್ದಿದೆ ಎಂದು ಕೀನ್ಯಾ ಬಾಹ್ಯಾಕಾಶ ಸಂಸ್ಥೆ ದೃಢಪಡಿಸಿದೆ. 2024ರ ಡಿಸೆಂಬರ್ 30 ರಂದು ಈ ಲೋಹದ ಉಂಗುರವು ಕೀನ್ಯಾದ ಮುಕುಕು ಗ್ರಾಮದಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 3 ಗಂಟೆಗೆ ಬಿದ್ದಿದೆ. ನೆಲಕ್ಕೆ ಬಿದ್ದಿರುವ ಉಂಗುರ ಆಕಾರದ ಲೋಹ ಬಾಹ್ಯಾಕಾಶ ರಾಕೆಟ್‌ನದ್ದೆಂದು ಹೇಳಲಾಗುತ್ತಿದೆ.

Edited By : Abhishek Kamoji
PublicNext

PublicNext

06/01/2025 05:18 pm

Cinque Terre

111.96 K

Cinque Terre

1