ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಪಂದ್ಯದಲ್ಲಿ ಗಮನಾರ್ಹ ಸಂಗತಿಯೊಂದು ನಡೆದಿದೆ. ಸ್ಟೀವ್ ಸ್ಮಿತ್ ಔಟ್ ಆದ ನಂತರ ಪ್ರೇಕ್ಷಕರು ವಿರಾಟ್ ಕೊಹ್ಲಿಯನ್ನು ಗೇಲಿ ಮಾಡಿದ್ದಾರೆ. ಇದನ್ನು ಗಮನಿಸುತ್ತಿದ್ದ ವಿರಾಟ್ ಕೊಹ್ಲಿ ಪ್ರೇಕ್ಷಕರತ್ತ ನೋಡಿ ತಮ್ಮ ಖಾಲಿ ಕಿಸೆಗಳನ್ನು ಆಚೆ ತೆಗೆದು ತೋರಿಸಿದ್ದಾರೆ. ನಂತರ ಒಮ್ಮೆ ತಮ್ಮ ಖಾಲಿ ಕೈ ತೋರಿಸಿ ಇನ್ನೊಮ್ಮೆ ಮುಂಗೈಗಳನ್ನು ಉಜ್ಜಿದ್ದಾರೆ.
ಈ ರೀತಿ ಸನ್ನೆ ಮಾಡಿ ತೋರಿಸಿದ ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿ ಸ್ಯಾಂಡ್ ಪೇಪರ್ ಇಲ್ಲ ಎಂಬುದನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿದ್ದಾರೆ.
ವಿರಾಟ್ ಹೀಗೆ ಮಾಡಿದ್ದಕ್ಕೆ ಕಾರಣವೇನು?
2018ರಲ್ಲಿ ಟೆಸ್ಟ್ ಪಂದ್ಯವನ್ನು ಆಡುವಾಗ ಗೆಲ್ಲುವುದಕ್ಕಾಗಿ ಆಸ್ಟ್ರೇಲಿಯಾ ತಂಡ ಅಡ್ಡದಾರಿ ಹಿಡಿದಿತ್ತು. ಇದಕ್ಕಾಗಿ ಸ್ಟಿವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಜೇಬುಗಳಲ್ಲಿ, ಶೂನಲ್ಲಿ, ಪ್ಯಾಂಟ್ ಒಳಗೆ ಸ್ಯಾಂಡ್ಪೇಪರ್ ಇಟ್ಟುಕೊಂಡು ಮೈದಾನಕ್ಕೆ ಬಂದು ಮೋಸದ ಆಟವನ್ನು ಆಡಿದ್ದರು. ಬಾಲ್ ಟ್ಯಾಂಪರಿಂಗ್ ಮಾಡಿದ್ದರು. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದ ಕ್ರಿಕೆಟ್ ಮಂಡಳಿ ಮೂವರು ಆಟಗಾರರನ್ನ ಬ್ಯಾನ್ ಮಾಡಿ ಶಿಕ್ಷೆ ವಿಧಿಸಿತ್ತು. ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಅಪರಾಧಕ್ಕಾಗಿ 1 ವರ್ಷದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದನ್ನ ನಿಷೇಧ ಮಾಡಲಾಗಿತ್ತು. ಈಗಲೂ ಕಳ್ಳಾಟಕ್ಕೆ ಆಸ್ಟ್ರೇಲಿಯನ್ನರು ಕುಖ್ಯಾತಿ ಹೊಂದಿದ್ದಾರೆ ಎಂದು ಕ್ರಿಕಟ್ ಲೋಕ ಹೇಳುತ್ತದೆ.
PublicNext
05/01/2025 10:32 pm