ಒಟ್ಟಾವೊ : ಭಾರತ ವಿರೋಧಿ ಹಾಗೂ ಖಲಿಸ್ತಾನಿಗಳ ಬೆಂಬಲಿಗ ಅಂತಾನೇ ತನ್ನನ್ನು ತಾನು ತೋರಿಸಿಕೊಳ್ಳುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ್ದಾರೆ.
ಜಸ್ಟಿನ್ ಟ್ರುಡೊ.. ಕೆನಡಾದ 23ನೇ ಪ್ರಧಾನಿ.. ನವೆಂಬರ್ 04.. 2015 ರಿಂದ ಪ್ರಧಾನಿಯಾಗಿ ಅಧಿಕಾರಿ ಸ್ವೀಕಾರ ಮಾಡಿದ ಟ್ರುಡೋ ಭಾರತದ ವಿರುದ್ಧ ಒಂದಲ್ಲ ಒಂದು ಆರೋಪ ಮಾಡುತ್ತಲೇ ಇದ್ದರು. ಪ್ರತ್ಯೇಕ ದೇಶಕ್ಕಾಗಿ ಆಗಾಗ್ಗೆ ಕ್ಯಾತೆ ತೆಗೆಯುವ ಖಲಿಸ್ತಾನಿ ಉಗ್ರರೊಂದಿಗೆ ಜಸ್ಟಿನ್ ಟ್ರುಡೋಗೆ ಎಲ್ಲಿದಲ್ಲದ ಪ್ರೀತಿ.. ಸದ್ಯ ಇದೇ ಪ್ರೀತಿ-ಸ್ನೇಹ ಇವರ ತಲೆದಂಡಕ್ಕೆ ಕಾರಣವಾಗಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2013ರಿಂದ ಕೆನಡಾದ ಲಿಬರಲ್ ಪಕ್ಷದ ನಾಯಕ ಹಾಗೂ 2015ರಿಂದ ಪ್ರಧಾನಿಯಾಗಿರುವ ಟ್ರುಡೋ, ಈ ಎರಡೂ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ.
ಒಟ್ಟಾವಾದ ರೈಡೋ ಕಾಟೇಜ್‌ನಲ್ಲಿರುವ ತಮ್ಮ ನಿವಾಸದ ಬಳಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಬಗ್ಗೆ ಮಾಹಿತಿ ನೀಡಿದ್ರು.
ನಾನು ಪಕ್ಷದ ನಾಯಕತ್ವ ಮತ್ತು ಕೆನಡಾ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಪಕ್ಷವು ತನ್ನ ಮುಂದಿನ ನಾಯಕನನ್ನು ದೃಢವಾದ, ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ನಂತರ ನಾನು ಪ್ರಧಾನ ಮಂತ್ರಿಯಾಗಿ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ. ಕಳೆದ ರಾತ್ರಿ ರಾಷ್ಟ್ರಪತಿಗಳ ಬಳಿ ಆ ಪ್ರಕ್ರಿಯೆಯನ್ನ ಶುರು ಮಾಡಿ ಎಂದು ಹೇಳಿದ್ದೇನೆ. ಈ ದೇಶವು ಮುಂದಿನ ಚುನಾವಣೆಯಲ್ಲಿ ನಿಜವಾದ ಆಯ್ಕೆಗೆ ಅರ್ಹವಾಗಿದೆ ಮತ್ತು ನಾನು ಆಂತರಿಕ ಕದನಗಳನ್ನು ಎದುರಿಸಬೇಕಾದರೆ, ಆ ಚುನಾವಣೆಯಲ್ಲಿ ನಾನು ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ನನಗೆ ಸ್ಪಷ್ಟವಾಗಿದೆ-ಜಸ್ಟಿನ್ ಟ್ರುಡೊ, ಕೆನಡಾದ ನಿರ್ಗಮಿತ ಪ್ರಧಾನಿ
ಟ್ರುಡೊ ಅವರು ತಮ್ಮ ಲಿಬರಲ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿರುವ ಕಾರಣ ರಾಜೀನಾಮೆ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಟ್ರುಡೊ ನೇತೃತ್ವದ ಲಿಬರಲ್ ಪಕ್ಷದ ಸರ್ಕಾರದಲ್ಲಿ ಆಂತರಿಕ ಕಲಹ ಉಂಟಾಗಿದೆ. ಟ್ರುಡೊ ನಾಯಕತ್ವದ ವಿರುದ್ದ ಅವರ ಪಕ್ಷದ ಸಂಸದರೇ ಅಪಸ್ವರ ಎತ್ತಿದ್ದಾರೆ. ಹಣಕಾಸು ಸಚಿವೆ ಕ್ರಿಸ್ಟಿನಾ ಫ್ರಿಲ್ಯಾಂಡ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಖಲಿಸ್ತಾನ್ ಪ್ರತ್ಯೇಕವಾದಿಗಳ ವಿಚಾರದಲ್ಲೂ ಟ್ರುಡೊ ನಾಯಕತ್ವ ಮತ್ತು ಭಾರತದ ನಡುವೆ ಸಂಬಂಧ ಹಳಸಿದೆ. ಟ್ರುಡೊ ಸರ್ಕಾರ ಕೆನಡಾದಲ್ಲಿರುವ ಖಲಿಸ್ತಾನಿಗಳ ಪರ ಹೇಳಿಕೆ ನೀಡುತ್ತಿರುವುದನ್ನು ಭಾರತ ಖಂಡಿಸಿದೆ.
PublicNext
07/01/2025 12:17 pm