ಬೆಂಗಳೂರು : HMP ವೈರಸ್ ಬಗ್ಗೆ ಆತಂಕ ಪಡಬೇಕಾಗಿಲ್ಲ, ಈ ವೈರಸ್ ಹೊಸದೇನಲ್ಲ. ಪ್ರತಿ ಒಂದು ಪರ್ಸೆಂಟ್ ಆದರೂ ದೇಶದಲ್ಲಿ HMP ವೈರಸ್ ಪತ್ತೆಯಾಗುತ್ತೆ ಎಂದು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಇಬ್ಬರು ಮಕ್ಕಳಲ್ಲಿ HMP ವೈರಸ್ ಪತ್ತೆಯಾಗಿದ್ದು, ಜನರು ಆತಂಕದಲ್ಲಿದ್ದಾರೆ. ಈ ಬಗ್ಗೆ ಆರೋಗ್ಯ ಸೌಧದಲ್ಲಿ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ವೈರಸ್ ಅಪಾಯಕಾರಿಯಲ್ಲ, ಮಾರಣಾಂತಿಕ ಅಲ್ಲ ಚಳಿಗಾಲದಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಯಾರು ಭಯ ಪಡಬೇಡಿ ಆದರೆ ಮಕ್ಕಳಲ್ಲಿ ಸ್ವಲ್ಪ ಎಚ್ಚರವಹಿಸಿ ಎಂದು ಹೇಳಿದ್ದಾರೆ
PublicNext
06/01/2025 06:10 pm