ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಬಾಲಕಿಯ ಬೌಲಿಂಗ್‌ ಆಕ್ಷನ್‌ಗೆ ಖ್ಯಾತ ಅಂಪೈರ್ ರಿಚರ್ಡ್ ಕೆಟಲ್‌ಬರೋ ಫಿದಾ

ನವದೆಹಲಿ: ಟೀಂ ಇಂಡಿಯಾ ಮಾಜಿ ವೇಗದ ಬೌಲರ್‌ ಜಹೀರ್ ಖಾನ್ ಸ್ಟೈಲ್‌ನಲ್ಲಿಯೇ ಬೌಲಿಂಗ್ ಮಾಡಿ ಸಖತ್ ಸದ್ದು ಮಾಡಿರುವ ಬಾಲಕಿಯ ಬಗ್ಗೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ನ ಖ್ಯಾತ ಅಂಪೈರ್ ರಿಚರ್ಡ್ ಕೆಟಲ್‌ಬರೋ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಚರ್ಡ್ ಕೆಟಲ್‌ಬರೋ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನ ತಮ್ಮ ಖಾತೆಯಲ್ಲಿ ಬಾಲಕಿ ಸುಶೀಲಾ ಮೀನಾ ವಿಡಿಯೋ ಹಂಚಿಕೊಂಡಿದ್ದಾರೆ. 'ಜಹೀರ್ ಖಾನ್‌ರಂತೆಯೇ ಉತ್ತಮ ಬೌಲಿಂಗ್ ಆಕ್ಷನ್. ಮುಂದೆ ನಿನಗೆ ಉಜ್ವಲ ಭವಿಷ್ಯವಿದೆ' ಎಂದು ಬಾಲಕಿಯನ್ನು ರಿಚರ್ಡ್ ಕೆಟಲ್‌ಬರೋ ಹೊಗಳಿದ್ದಾರೆ.

ಸುಶೀಲಾ ಮೀನಾ ಅವರು ರಾಜಸ್ಥಾನದ ಪ್ರತಾಪಗಢದವರು. ಎಡಗೈ ವೇಗದ ಬೌಲರ್ ಆಗಿರುವ ಆಕೆಯ ಬೌಲಿಂಗ್‌ನ ಹೆಚ್ಚಿನ ವಿಡಿಯೋಗಳು ಮತ್ತು ಇತರ ಶಾಲಾ ಮಕ್ಕಳು ಕ್ರಿಕೆಟ್ ಆಡುವ ವಿಡಿಯೋಗಳನ್ನು @aamliya_ishwar Instagram ಖಾತೆಯಲ್ಲಿ ನೋಡಬಹುದಾಗಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ವೇಗದ ಬೌಲರ್‌ ಜಹೀರ್ ಖಾನ್ ಅವರು ಬಾಲಕಿಯ ಬೌಲಿಂಗ್ ಆಕ್ಷನ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಇದೀಗ ಸುಶೀಲಾ ಮೀನಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಕೇಂದ್ರ ಕ್ರೀಡಾಸಚಿವ ಹಾಗೂ ಒಲಿಂಪಿಕ್ ಪದಕ ವಿಜೇತ ರಾಜವರ್ಧನ್ ಸಿಂಗ್ ರಾಥೋಡ್ ಅವರನ್ನು ಬೌಲಿಂಗ್‌ನಲ್ಲಿ ಕ್ಲೀನ್ ಮಾಡಿದ್ದಾರೆ. ಇದೇ ವಿಡಿಯೋವನ್ನೇ ರಿಚರ್ಡ್ ಕೆಟಲ್‌ಬರೋ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

06/01/2025 07:14 pm

Cinque Terre

83.31 K

Cinque Terre

1

ಸಂಬಂಧಿತ ಸುದ್ದಿ