ಉತ್ತರ ಪ್ರದೇಶದ ವಾರಣಾಸಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 05, ಶನಿವಾರದಂದು ವಿಚಾರಣೆ ನಡೆಯುತ್ತಿದ್ದ ವೇಳೆ ಅನೀರಿಕ್ಷಿತವಾಗಿ ಕೋರ್ಟ್ ಹಾಲ್‌ಗೆ ಕೋತಿಯೊಂದು ಎಂಟ್ರಿ ಕೊಟ್ಟ ಘಟನೆ ಸಂಭವಿಸಿದೆ.
ಇನ್ನೂ ನ್ಯಾಯಾಲಯಕ್ಕೆ ಬಂದ ಕೋತಿ ಸುಮಾರು ಒಂದು ಗಂಟೆಗಳ ಕಾಲ ಕೋರ್ಟ್ ಮೇಜಿನ ಮೇಲೆ ಕುಳಿತು ನಂತರ ಅಲ್ಲಿಂದ ಎದ್ದು ಹೋಗಿದೆ. ಈ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಿಂದೂಗಳು ಇದು ಶುಭದ ಸಂಕೇತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತ ವಿಡಿಯೋವನ್ನು ಸಚಿನ್ ಗುಪ್ತಾ (SachinGuptaUP) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PublicNext
06/01/2025 02:20 pm