ಶಿವಮೊಗ್ಗ: ಉತ್ತಮ ಜೀವನಶೈಲಿಯಿಂದ ಮಾರಕ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ಹೊಸನಗರದ ಪುರಪ್ಪ ಮನೆ ಹಿರಿಯ ವೈದ್ಯಾಧಿಕಾರಿ ಡಾ. ಪತಂಜಲಿ ಹೇಳಿದರು.
ಗ್ರಾಮ ಭಾರತಿ ಟ್ರಸ್ಟ್ ಕಾರಣಗಿರಿ, ಸಾಹಸ ಮತ್ತು ಸಂಸ್ಕೃತಿ ಅಕಾಡಮಿ ಶಿವಮೊಗ್ಗ, ಆರೋಗ್ಯ ಭಾರತಿ ಜಿಲ್ಲಾ ಘಟಕ, ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ, ತೀರ್ಥಹಳ್ಳಿಯ ಎಂಐಒ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ, ರಾಷ್ಟ್ರೋತ್ಥಾನ ಬಳಗ ಕಾರಣಗಿರಿ ಇವರ ಸಂಯುಕ್ತಾಶ್ರಯದಲ್ಲಿ ಕಾರಣಗಿರಿಯ ಸಂಸ್ಕೃತಿ ಭವನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ಇಂದು ಮನುಕುಲವನ್ನು ಕಾಡುತ್ತಿರುವ ಕಾಯಿಲೆಯಾಗಿದೆ ಆಹಾರ ಶೈಲಿಯೂ ಇದಕ್ಕೆ ಕಾರಣವಾಗಿದೆ ಕ್ಯಾನ್ಸರ್ ಬಂದಿದ್ದೆ ಗೊತ್ತಾಗುವುದಿಲ್ಲ ಆದ್ದರಿಂದ ತಪಾಸಣೆ ಅತಿ ಮುಖ್ಯ ಎಂದರು.
ಡಾ. ನಮಿತಾ ಉಡುಪ ಮಾತನಾಡಿ ಯೋಗದ ಮೂಲಕ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳನ್ನು ದೂರ ಮಾಡಲು ಸಾಧ್ಯ, ಕಾಯಿಲೆ ಬಂದಾಗಲೂ ಕೂಡ ಯಾವುದೇ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.
ತೀರ್ಥಹಳ್ಳಿಯ ಎಂಐಓ ಕ್ಯಾನ್ಸರ್ ಆಸ್ಪತ್ರೆಯ ಅನ್ನಪೂರ್ಣ ಮಾತನಾಡಿ ನಮ್ಮಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚಾಗಿದ್ದು ಗುಟ್ಕಾದಂತಹ ಕಾಯಿಲೆಗಳಿಂದ ದುಷ್ಟಗಳಿಂದ ದೂರವಿರಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಭಾರತಿ ಟ್ರಸ್ಟಿನ ಅಧ್ಯಕ್ಷ ಹನಿಯಾ ರವಿ ಕ್ಯಾನ್ಸರ್ ನಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ, ಜೀವವು ಮುಖ್ಯ ಜೀವನವು ಮುಖ್ಯ ಎಂದು ಕರೋನದ ಸಂದರ್ಭದಲ್ಲಿ ಹೇಳಲಾಗುತ್ತಿತ್ತು ಆದರೆ ಕರೋನಕ್ಕಿಂತ ಕ್ಯಾನ್ಸರ್ ನಿಂದ ಮರಣ ಹೊಂದುವರ ಸಂಖ್ಯೆ ಹೆಚ್ಚಾಗಿದೆ ಸರ್ಕಾರ, ಆಸ್ಪತ್ರೆಗಳು ಸಂಘ-ಸಂಸ್ಥೆಗಳು ಎಲ್ಲರೂ ಒಟ್ಟಾಗಿ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ಮಾಡಲಿಕ್ಕೆ ಪಣತೊಡಬೇಕಾಗಿದೆ ಎಂದರು.
ಆರೋಗ್ಯ ಭಾರತೀಯ ದಕ್ಷಿಣ ಪ್ರಾಂತ್ಯ ಕಾರ್ಯ ಕಾರಣೀ ಸದ್ಯಸೆ ವೈದ್ಯ ಪಲ್ಲವಿ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯಕ್ಕೆ ಆದ್ಯತೆ ಕೊಡುವುದನ್ನು ನಾವು ಇಂದು ಮರೆತಿದ್ದೇವೆ ಕ್ಯಾನ್ಸರ್ ಗುಣಪಡಿಸುವ ಕಾಯಿಲೆ, ಆಯುರ್ವೇದದಲ್ಲೂ ಇದಕ್ಕೆ ಚಿಕಿತ್ಸೆ ಇದೆ ಯೋಗ, ಆಹಾರ, ವಿಹಾರ, ಧ್ಯಾನ, ಪ್ರಾಣಾಯಮ ಗಳಿಂದ ಕಾಯಿಲೆಗಳೇ ಬಾರದಂತೆ ನೋಡಿಕೊಳ್ಳಬಹುದು ಎಂದರು ಕಾರ್ಯಕ್ರಮದಲ್ಲಿ ಗ್ರಾಮವಿಕಾಸ ಸಮಿತಿ ಅಧ್ಯಕ್ಷ ನಳಿನ ಚಂದ್ರ, ಎನ್ ಡಿ ನಾಗೇಂದ್ರ ರಾವ್, ಆರೋಗ್ಯ ಭಾರತಿ ವಿಭಾಗ ಸಂಯೋಜಕ ಶ್ರೀಧರ್, ಸೇರಿದಂತೆ ಹಲವರಿದ್ದರು. ವಿನಾಯಕ ಪ್ರಭು ಸ್ವಾಗತಿಸಿದರು.
Kshetra Samachara
06/01/2025 01:36 pm